ಶಿರಸಿ: ಮಳೆ ಕಡಿಮೆಯಾದರೂ ಮಳೆಯ ಅವಾಂತರ ಇನ್ನು ತಕ್ಕಿಲ್ಲ ಹಲವಡೆ ಅನಾಹುತಗಳು ಸಂಭವಿಸುತ್ತಲೇ ಇದೆ ತಾಲೂಕಿನ ಖಾಜಿಗಲ್ಲಿಯಲ್ಲಿ ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ವೃದ್ಧೆಯೊಬ್ಬರು ಹೆಂಚು ಪಕಾಸು, ಗೋಡೆ ಕಲ್ಲಿನ ಅಡಿಯಲ್ಲಿ ಸಿಲುಕಿದ್ದರೂ ಸಣ್ಣಪುಟ್ಟ ಗಾಯದೊಂದಿಗೆ ಸಿನಿಮೀಯ ರೀತಿಯಲ್ಲಿ ಪಾರಾಗಿದ್ದಾರೆ.
ಸುಮಾರು 80 ವರ್ಷದ ವೃದ್ಧೆ ಬಶಿರಾಬಿ ಜೀವಾಪಾಯದಿಂದ ಪಾರಾದವರಾಗಿದ್ದಾರೆ. ಮನೆಯಲ್ಲಿ ಒಂಟಿಯಾಗಿ ಇರುತ್ತಿದ್ದ ವೃದ್ಧೆ ಮಂಗಳವಾರ ಮಧ್ಯಾಹ್ನ ಊಟ ಮಾಡಿ ಮನೆಯಲ್ಲಿ ಮಲಗಿದ್ದರು. ಆಗ ಮನೆ ಏಕಾಏಕಿ ಕುಸಿದು ಬಿದ್ದಿದ್ದರಿಂದ ವೃದ್ಧೆಯು ಮುರಿದು ಬಿದ್ದಿದ್ದ ಹೆಂಚು- ಪಕಾಸು, ಕಲ್ಲುಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು.
ಇದನ್ನು ನೋಡಿದ ಅಕ್ಕಪಕ್ಕದ ಜನರು ವೃದ್ಧೆಯನ್ನು ರಕ್ಷಿಸಿ ಸರಕಾರಿ ಆಸ್ಪತ್ರೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೋಡೆ ಬಿದ್ದಿದ್ದರಿಂದ ಮನೆಯ ಹೊರಗಡೆ ಇಡಲಾಗಿದ್ದ ಎರಡು ಬೈಕ್‌ಗಳು ನುಜ್ಜುಗುಜ್ಜಾಗಿ ಹೋಗಿದೆ, ಅದೃಷ್ಟ ವಷಾತ್ ವೃದ್ದೆ ಏನು ಅಪಾಯವಾಗದೆ, ಪ್ರಾಣಾಪಾಯದಿಂದ ಪಾರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.