ಶಿರಸಿ: ಶಿರಸಿಯ ಗಾಣಿಗ ಸಮಾಜ ಯುವಕ ಮಂಡಳ ಇವರಿಂದ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಸಮಾಜ ಬಾಂಧವರಿಗಾಗಿ 15-08-2016ರ ನಂತರ ಜನಿಸಿದ ಮಕ್ಕಳಿಗೆ ರಾಜ್ಯಮಟ್ಟದ ಬಾಲ ಕೃಷ್ಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಆಸಕ್ತರು ಆ.20 ರ ಒಳಗಾಗಿ ತಮ್ಮ ಮಕ್ಕಳ ಇತ್ತೀಚಿನ ಬಾಲ ಕೃಷ್ಣ ವೇಷಧಾರಿ ಪೋಟೋ ಮತ್ತು ಜನ್ಮ ದಿನಾಂಕದ ಬಗ್ಗೆ ದಾಖಲೆಯೊಂದಿಗೆ ವಾಟ್ಸಪ್ ಮೊಬೈಲ್ ನಂ. 9742235344 ಗೆ ಕಳುಹಿಸಿ ಕೊಡಲು ಕೋರಿದೆ. ಎಂಟ್ರಿ ಶುಲ್ಕ ರೂ. 150/- ನ್ನು ಇದೇ ನಂಬರಿಗೆ ಗೂಗಲ್ ಪೇ ಅಥವಾ ಪೋನ್ ಪೇ ಮೂಲಕ ನೀಡಬಹುದಾಗಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿರುತ್ತಾರೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದೆ.

RELATED ARTICLES  ಏಮ್ಸ್ ನಲ್ಲಿ ವಿವಿಧ ಹುದ್ದೆಗಳು.