ಯಲ್ಲಾಪುರ : ಒಂದೆಡೆ ಅಕ್ರಮ ಗೋ ಸಾಗಟ ಹಾಗೂ ಮಾಂಸ ಸಾಗಾಟ ಪ್ರಕರಣಗಳು ಪತ್ತೆಯಾಗುತ್ತಿದ್ರೆ, ತಾಲೂಕಿನ ಮಲ್ಲಾಪುರ ಗ್ರಾ. ಪಂ.ವ್ಯಾಪ್ತಿಯ ಕಾಳಿಕಾ ಮೈದಾನದಲ್ಲಿ ಯಾರೋ ಕಿಡಿಗೇಡಿಗಳು ದನದ ಮಾಂಸ ಮತ್ತು ಅವಶೇಷಗಳನ್ನು ಎಸೆದು ಹೋಗಿದ್ದು, ಈ ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ಪೊಲೀಸ್ರು ಹಾಗೂ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿರುವ ಘಟನೆ ನಡೆದಿದೆ.

RELATED ARTICLES  ಎರಡು ದಶಕದ ಹಿಂದೆ ಶೇಖರಿಸಲ್ಪಟ್ಟ ಭ್ರೂಣದಿಂದ ಅಮೆರಿಕಾ ದಂಪತಿಗೆ ಮಗು ಜನನ!

ಕಾಳಿಕಾ ಮೈದಾನದ ಕಾಳಿಕಾ ಗುಡಿಯ ಬಳಿ ದನದ ಅವಯವಗಳನ್ನು ಎಸೆದು ಹೋಗಿದ್ದು, ಇದು ಕೊಳೆತ ಸ್ಥಿತಿಯಲ್ಲಿ ಇದ್ದುದರಿಂದ ದುರ್ನಾತ ಬೀರುತ್ತಿದೆ. ಇತ್ತೀಚೆಗೆ ಜರುಗಿದ ಹಬ್ಬಕ್ಕೆ ದನದ ಮಾಂಸ ಬಳಸಿ ಉಳಿದದ್ದನ್ನು ಆ ಸ್ಥಳದಲ್ಲಿ ಎಸೆದು ಹೋಗಿರಬಹುದೆನ್ನುವ ಅನುಮಾನ
ಕೆಲವರಿಗೆ ಕಾಡಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ತನಿಖೆ ನಂತರದಲ್ಲಿ ಘಟನೆಗೆ ಕಾರಣ ತಿಳಿದು ಬರಬೇಕಿದೆ.

RELATED ARTICLES  ಭಾರತೀಯ ಸೈನ್ಯದ ವೀರ ಯೋಧ ಗಿರೀಶ ನಾಯ್ಕ ಅಂತ್ಯ ಸಂಸ್ಕಾರ : ಊರಿನಲ್ಲಿ ಸ್ಮಶಾನ ಮೌನ.