ಹೊನ್ನಾವರ: ಹೆಣ್ಣು ಮಕ್ಕಳ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಲೇ ಇದು ಕಾನೂನುಗಳು ಎಷ್ಟೇ ಬಿಗಿ ಗೊಳ್ಳುತ್ತಿದ್ದರೂ, ಇಂತಹ ಪ್ರಕರಣಗಳು ಮತ್ತೆ ಮತ್ತೆ ದಾಖಲಾಗುತ್ತಿವೆ. ಅಪ್ರಾಪ್ತೆಯನ್ನು ಪ್ರೀತಿಸುವ ನಾಟಕವಾಡಿ ಕಳೆದ ನಾಲ್ಕು ತಿಂಗಳಿಂದ ಮನೆಯಲ್ಲೇ ಇರಿಸಿಕೊಂಡು ಮದುವೆಯಾಗುವುದಾಗಿ ಪುಸಲಾಯಿಸಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ತಾಲೂಕಿನ ಯುವಕನೋರ್ವನ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES  ಹೊಟ್ಟೆಯಲ್ಲಿ ಬೆಂಕಿ ಇದ್ದರೆ ಮಾತ್ರ ಸಾಧನೆ ಸಾಧ್ಯ: ಮುರಳೀಧರ ಪ್ರಭು

ತನ್ನನ್ನು ನಂಬಿಸಿ ಮೋಸ ಮಾಡಿದ್ದಾನೆ ಎಂದು ಅಪ್ರಾಪ್ತೆ ದೂರಿನಲ್ಲಿ ಆರೋಪಿಸಿದ್ದಾಳೆ. ಗೇರುಸೊಪ್ಪಾ ದೇವಿಗದ್ದೆಯ ಯುವಕ ಸಂದೇಶ ಎನ್ನುವವರ ಮೇಲೆ ಅಪ್ರಾಪ್ತ ಯುವತಿಯೇ ದೂರು ದಾಖಲಿಸಿದ್ದಾಳೆ ಎಂದು ಸ್ಥಳೀಯ ಪತ್ರಿಕೆ ವರದಿಮಾಡಿದೆ. ದೂರಿನ ಮೇಲೆ ಹೊನ್ನಾವರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಆರಂಭಿಸಿದ್ದಾರೆ. ತನಿಖೆಯ ನಂತರದಲ್ಲಿ ಅಷ್ಟೇ ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ.

RELATED ARTICLES  ಉಚಿತ‌ ನೇತ್ರ ತಪಾಸಣಾ ಶಿಬಿರ ಯಶಸ್ವಿ.