ಕುಮಟಾ: ಗೋಕರ್ಣದ ಭದ್ರಕಾಳಿ ವಿದ್ಯಾಲಯ ಕ್ರೀಡಾಂಗಣದಲ್ಲಿ ಬುಧವಾರ (ಆಗಸ್ಟ್ 17) ನಡೆದ ಪ್ರಾಥಮಿಕ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲ ವಿದ್ಯಾರ್ಥಿಗಳು ಅನೇಕ ಪ್ರಶಸ್ತಿಗಳನ್ನು ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ 600 ಮೀಟರ್ ಓಟದಲ್ಲಿ ಶೈವಿಕಾ ಪ್ರಥಮ ಸ್ಥಾನ ಪಡೆದಿದ್ದು, ಬಾಲಕರ ವಿಭಾಗದಲ್ಲಿ ಚರಣ್ ರೆಡ್ಡಿ ತೃತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾದರು. ಬಾಲಕಿಯರ 400 ಮೀಟರ್ ಓಟದಲ್ಲಿ ಪ್ರಾರ್ಥನಾ ಮೊದಲ ಸ್ಥಾನ ಗೆದ್ದರೆ 200 ಮೀಟರ್ ಓಟದಲ್ಲಿ ಸ್ನೇಹಾ ಬಿರಾದಾರ್ (ಪ್ರಥಮ) ಮತ್ತು ಪವಿತ್ರಾ (ದ್ವಿತೀಯ) ತಾಲೂಕು ಮಟ್ಟಕ್ಕೆ ಅರ್ಹತೆ ಪಡೆದರು. ಲಾಂಗ್ ಜಂಪ್‍ನಲ್ಲಿ ಪವಿತ್ರಾ (ಪ್ರಥಮ), ಚೆಸ್‍ನಲ್ಲಿ ಸನತ್ (ಪ್ರಥಮ), ಶ್ರೇಯಾ (ದ್ವಿತೀಯ), ಭರತ್ (ದ್ವಿತೀಯ), ಯೊಗದಲ್ಲಿ ರಾಘವ (ತೃತೀಯ), ಶಾಟ್‍ಪುಟ್‍ನಲ್ಲಿ ಶ್ರೀರಕ್ಷಾ ತಾಲೂಕು ಮಟ್ಟಕ್ಕೆ ಆಯ್ಕೆಯಾದರು.

RELATED ARTICLES  ಚರ್ಚಾ ಸ್ಪರ್ಧೆಯಲ್ಲಿ ಎಸ್.ಡಿ.ಎಂ.ಮಹಾವಿದ್ಯಾಲಯದ ಕು. ಮೇಧಾ ಶಂಕರ ಭಟ್ಟ ತೃತೀಯ

ಖೋ ಖೋ ಹಾಗೂ ಥ್ರೋಬಾಲ್‍ನಲ್ಲಿ ಗುರುಕುಲ ತಂಡಗಳು ಪ್ರಥಮ ಸ್ಥಾನ ಪಡೆದು ವಲಯ ಮಟ್ಟದ ವೀರಾಗ್ರಣಿ ಪ್ರಶಸ್ತಿ ಪಡೆದವು. ಪವಿತ್ರಾ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಗೆ ಆಯ್ಕೆಯಾದರು.
ವಿಜೇತ ಮಕ್ಕಳನ್ನು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳನ್ನು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀಸ್ವಾಮೀಜಿಯವರು ಹರಸಿದರು. ಪ್ರಾಚಾರ್ಯ ಮಹೇಶ್ ಹೆಗಡೆ, ಉಪಪ್ರಾಚಾರ್ಯರಾದ ಸೌಭಾಗ್ಯ, ವಿಶ್ವೇಶ್ವರ ಹಾಗೂ ದೈಹಿಕ ಶಿಕ್ಷಕ ಅಕ್ಷಯ ಅಡಿಗುಂಡಿ ಮತ್ತಿತರರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

RELATED ARTICLES  Software Development Cost