ಅಂಕೋಲಾ : ಅಂಗಡಿ ಮುಚ್ಚಿ ಮನೆಗೆ ಹೋದ ನಂತರ ಅಂಗಡಿಯೊಳಗೆ ಪ್ರವೇಶ ಮಾಡಿ ಸುಮಾರು 12 ಸಾವಿರ ರೂಪಾಯಿ ಬೆಲೆಯ ರಿಯಲ್ ಮಿ ಸಿ2 ಮಾದರಿಯ 1 ಫೋನ್ ,10 ಸಾವಿರ ಮೌಲ್ಯದ ಎಂ.ಐ, ನೋಟ್ 4 ಮಾದರಿಯ 1 ಪೋನ್ ಕಳ್ಳತನ ನಡೆಸಿದ್ದು ಡ್ರಾವರ ನಲ್ಲಿ ಇದ್ದ 1 ಸಾವಿರ ನಗದು ಹಣ ಕಳ್ಳತನ ಮಾಡಿದ ಘಟನೆ ತಾಲೂಕಿನ ಅವರ್ಸಾ ಗ್ರಾಮದಲ್ಲಿ ವರದಿಯಾಗಿದೆ.

RELATED ARTICLES  ಕುಮಟಾದಲ್ಲಿ ನಾರಾಯಣ ಗುರುಗಳ ಜಯಂತಿ

ಅವರ್ಸಾ ಗ್ರಾಮದಲ್ಲಿ ಸಂಜೀವ ಸುಧಾಕರ ನಾಯ್ಕ ನಡೆಸುತ್ತಿರುವ ಮೊಬೈಲ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕಳ್ಳರ ಚಲನ – ವಲನ ಪತ್ರೆಯಾಗಿದ್ದು,ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

RELATED ARTICLES  ಮಗಳನ್ನೇ ಅಪಹರಣ ಮಾಡಿದ ತಾಯಿ‌: ದಾಖಲಾಯ್ತು ದೂರು