ಭಟ್ಕಳ: ಮೆಡಿಕಲ್ ಶಾಪ್ ಒಂದರಲ್ಲಿ ಬುರ್ಖಾಧಾರಿಗಳು ಬಂದು ಕಳ್ಳತನ ಮಾಡಿದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಭಟ್ಕಳ ಕಟ್ಟಿಗೆ ಡಿಪ್ಪೊ ಸಮೀಪ ಇರುವ ಅಪೋಲೊ ಮೆಡಿಕಲ್ ಮಳಿಗೆಯಲ್ಲಿ ಮೂವರು ಬುರ್ಕಾಧಾರಿ ಮಹಿಳೆಯರು ತಮ್ಮ ಕೈಚಳಕ ತೋರಿದ್ದಾರೆ. ಸಿ ಸಿ ಕ್ಯಾಮೆರಾ ಅಳವಡಿಸಿದ್ದರು ಸಹ ಅದು ಯಾವುದನ್ನು ಗಮನಿಸೋದೇ ಇವರು ಕಳ್ಳತನಕ್ಕೆ ಮುಂದಾಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

RELATED ARTICLES  ಮಕ್ಕಳ ಪ್ರಶ್ನೆಗೆ ಉತ್ತರ ನೀಡುತ್ತೆ ರೋಬೋಟ್ : ವಾವ್ ಇದೇನು ನೋಡಿ.

ಸುಮಾರು ನಿನ್ನೆ ಮಧ್ಯಾಹ್ನ 2 ಗಂಟೆಗೆ ಗ್ರಾಹಕರ ಸೋಗಿನಲ್ಲಿ ಬಂದ ಮೂವರು ಬುರ್ಕಾದಾರಿ ಮಹಿಳೆಯರು ಔಷಧಿ ಖರೀದಿಸುವ ನಾಟಕವಾಡಿದ್ದಾರೆ.ವೇಳೆ ಅಲ್ಲೇ ಇದ್ದ ಸಿಬ್ಬಂದಿಯನ್ನು ಯಾಮಾರಿಸಿ ಕೈಚಳಕ ತೋರಿಸಿದ್ದು, ಔಷಧಿ ಅಂಗಡಿಯಲ್ಲಿದ್ದ ಕೆಲ ವಸ್ತುಗಳನ್ನು ತಮ್ಮ ಬುರ್ಕಾದಲ್ಲಿ ಹಾಕಿಕೊಂಡು ಕಳ್ಳತನ ಮಾಡಿದ್ದಾರೆ.

RELATED ARTICLES  ಗೋಕರ್ಣದಲ್ಲಿ ಸೋನಿ ಮತಯಾಚನೆ : ಪಕ್ಷ ಸೇರಿದ ಹಲವು ಪ್ರಮುಖರು.

ವಿಡಿಯೋ..

ಅನುಮಾನ ಬಂದು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಲೀಕರು ಪೊಲೀಸರ ಮೊರೆ ಹೋಗಿದ್ದು ಪ್ರಕರಣ ತನಿಖೆ ನಡೆಸಿದ ನಂತರ ಪೂರ್ಣ ಮಾಹಿತಿ ಹೊರ ಬರಬೇಕಿದೆ.