ಹೊನ್ನಾವರ : ತಾಲೂಕಿನ ಕಾವೂರಿನಲ್ಲಿ ನಡೆದಿದೆ, ಸೊಳ್ಳೆ ನಿವಾರಣೆಗೆ ಬಳಸುವ ಗುಡ್ ನೈಟ್ ಲಿಕ್ವಿಡ್ ಕುಡಿದು 2 ವರ್ಷದ ಮಗು ಮೃತಪಟ್ಟ ಘಟನೆ ನಡೆದಿದು. ಎರಡು ವರ್ಷದ ಆರವ ಮಹೇಶ್ ನಾಯ್ಕ ಮೃತಪಟ್ಟ ಬಾಲಕ. ಮನೆಯ ನೆಲದ ಮೇಲೆ ಇಟ್ಟಿದ್ದ ಮಾಸ್ಕಿಟೋ ಲಿಕ್ವಿಡ್ ಅನ್ನು ಎರಡು ವರ್ಷದ ಬಾಲಕ ಅಕಸ್ಮಾತಾಗಿ ಕುಡಿದಿದ್ದಾನೆ ಎಂದು ವರದಿಯಾಗಿದೆ.

RELATED ARTICLES  ಯಕ್ಷಗಾನದ ಇಬ್ಬರು ದಿಗ್ಗಜರಿಗೆ ಪ್ರಶಸ್ತಿ ಪ್ರಕಟ

ಮಗು ಲಿಕ್ವಿಡ್ ಕುಡಿದ ವಿಷಯ ತಿಳಿದ ತಕ್ಷಣ ಹೆಚ್ಚಿನ ಚಿಕಿತ್ಸೆಗಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಬಾಲಕನನ್ನು ಕಳೆದುಕೊಂಡ ತಂದೆ, ತಾಯಿ, ಬಂಧುಗಳ ಆಕ್ರಂದನ ಮುಗಿಲುಮುಟ್ಟಿದೆ.

RELATED ARTICLES  ಪುಟ್ಟ ಗೌರಿ ತಮ್ಮ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿ ಕೊಟ್ಟಿದ್ದಾಳೆ!