ಕುಮಟಾದಲ್ಲಿ ನೆಲೆಸಿರುವ ರಾಜಸ್ಥಾನಿಗಳು ಮತ್ತು ಗುಜರಾತಿಗಳೆಲ್ಲ ಸೇರಿ ಅತ್ಯಂತ ಸಂಭ್ರಮ ಸಡಗರದಿಂದ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಿದರು. ಸಂಭ್ರಮದಲ್ಲಿ ಬಿಜೆಪಿ ಯ ಯುವ ಮೋರ್ಚಾ ಜಿಲ್ಲಾ ಪ್ರಭಾರಿ ಎಮ್ ಜಿ ಭಟ್ ಅವರು ಭಾಗವಸಿದರು.ಈ ಸಂದರ್ಭದಲ್ಲಿ ಎಂ ಜಿ ಭಟ್ ಅವರನ್ನು ಪೇಟ ತೊಡಿಸಿ ಗೌರವಿಸಲಾಯಿತು.

RELATED ARTICLES  ಲಕ್ಷ ಲಕ್ಷ ರೂಪಾಯಿಯ ಗೋವಾ ಮದ್ಯ ಹಾಗೂ ಪೆನ್ನಿ ವಶ

ಈ ಸಂದರ್ಭದಲ್ಲಿ ಮಾತನಾಡಿದ ಎಂ ಜಿ ಭಟ್ ಇಂದು ನಮ್ಮ ದೇಶದಲ್ಲಿ ಪ್ರತಿಯೊಬ್ಬ ಹಿಂದೂ ಕೂಡ ಧರ್ಮಕ್ಕಾಗಿ ಕೆಲಸ ಮಾಡ್ಬೇಕಾಗಿದೆ. ನಾವೆಲ್ಲ ಒಂದಾಗಿ ಧರ್ಮ ರಕ್ಷಣೆ ಮಾಡಲೇಬೇಕಾಗಿದೆ. ಮುಂದಿನ ಪೀಳಿಗೆಗಾಗಿ ಸದ್ರಡ ದೇಶ ಕಟ್ಟುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ದೂರದ ಊರಿನಿಂದ ನಮ್ಮ ಕುಮಟಾದಲ್ಲಿ ನೆಲೆ ನಿಂತು ನಮ್ಮೊಂದಿಗೆ ಬೆರೆತಿರುವ ರಾಜಸ್ಥಾನಿಗಳು ಮತ್ತು ಗುಜರಾತಿಗಳು ಪ್ರತಿ ವರ್ಷವೂ ಅದ್ದೂರಿಯಾಗಿ ಸಂಪ್ರದಾಯದಂತೆ ಪ್ರತಿ ವರ್ಷವೂ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ,ಇಂತಹ ಧಾರ್ಮಿಕ ಕಾರ್ಯಕ್ರಮಗಳು ದೊಡ್ಡ್ ಪ್ರಮಾಣದಲ್ಲಿ ನಡೆಯಬೇಕಾಗಿದೆ. ಎಂಬ ಸಂದೇಶ ನೀಡಿದರು.

RELATED ARTICLES  ಅದು ಜೀವನದ ಅಮೂಲ್ಯ ಕ್ಷಣ, ದೇಶಸೇವೆಯ ತುಡಿತ ಇನ್ನೂ ಹೆಚ್ಚಾಗಿದೆ : ಪಾಕ್ ಉಗ್ರರನ್ನು ಸದೆಬಡಿದ ಕರಾವಳಿ ಸೈನಿಕರ ಅನುಭವ ಕಥನ!