ಭಟ್ಕಳ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಭಟ್ಕಳ ಸಾರ್ವಜನಿಕರ ವೇದಿಕೆ ಅಡಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸೇರಿ ಭಟ್ಕಳ ಸರಕಾರಿ ಆಸ್ಪತ್ರೆಯ ಖ್ಯಾತ ಶಸ್ತçಚಿಕಿತ್ಸಕರಾದ ಡಾ. ಅರುಣ್‌ಕುಮಾರ ರವರನ್ನು ಭಟ್ಕಳದ ಸರಕಾರಿ ಆಸ್ಪತ್ರೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕರ ವೇದಿಕೆಯ ಅಧ್ಯಕ್ಷ ಹಾಗೂ ಭಟ್ಕಳ ಅರ್ಬನ್ ಬ್ಯಾಂಕಿನ ನಿರ್ಧೇಶಕರಾದ ಶ್ರೀಧರ ನಾಯ್ಕ ಈ ಸಂದರ್ಭದಲ್ಲಿ ಮಾತನಾಡಿ ಸಾರ್ವಜನಿಕರಿಗೆ ಅದರಲ್ಲೂ ಬಡವರಿಗೆ ಸಮಯದ ಮಿತಿಯಿಲ್ಲದೇ ಬಡವರ ಸೇವೆಗೈಯ್ಯುತ್ತಿರುವ ಭಟ್ಕಳದ ಸರಕಾರ ಆಸ್ಪತ್ರೆಯ ವೈದ್ಯರಾದ ಡಾ. ಅರುಣ್ ಕುಮಾರ ರವರ ಸೇವೆ ಅಸಾಮಾನ್ಯವಾದ್ದು. ಅವರು ನಿರ್ಗತಿಕ ಬಡ ರೋಗಿಗಳಿಗೆ ವೇಳೆಯ ಇತಿಮಿತಿಯಿಲ್ಲದೇ ತನ್ನ ಕೈಯಿಂದ ಹಣವನ್ನು ವ್ಯಯಿಸಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಬಡ ರೋಗಿಗಳು ಈ ವೈದ್ಯರನ್ನು ದೇವರಂತೆ ಕಾಣುತ್ತಿದ್ದು ಭಟ್ಕಳದ ಪ್ರತಿ ಸಾರ್ವಜನಿಕರ ಮನದಲ್ಲಿ ಈ ವೈದ್ಯರು ಹೆಸರುವಾಸಿಯಾಗಿದ್ದಾರೆ. ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸುತ್ತಿರುವು ಭಟ್ಕಳದ ಸಾರ್ವಜನಿಕರ ಭಾಗ್ಯವಾಗಿದೆ ಇಂತಹ ವೈದ್ಯರನ್ನು ಭಟ್ಕಳದಲ್ಲಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ
ವೇದಿಕೆಯಲ್ಲಿ ಉಪಸ್ಥಿತರಿದ್ದ ಸರಕಾರಿ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ, ಸವಿತಾ ಕಾಮತ್ ಮಾತನಾಡಿ ಭಟ್ಕಳದ ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರಿದ್ದು ಅದರಲ್ಲೂ ಡಾ. ಅರುಣ್‌ಕುಮಾರರವರು ಸೇವೆಯಲ್ಲಿ
ಅವರು ಅಗ್ರಗಣ್ಯರು .ಇವರು ಹಗಲು ರಾತ್ರಿ ಎನ್ನದೇ ಸೇವೆ ಸಲ್ಲಿಸುತ್ತಿದ್ದು ಇವರು ಯಾವುದೇ ಅಪೆಕ್ಷೆಯಿಲ್ಲದೇ ಸೇವೆ ಸಲ್ಲಿಸುತ್ತಿದ್ದಾರೆ ಇಂತಹ ವೈದ್ಯ ಸೇವೆಯಿಂದಲೆ ಭಟ್ಕಳ ಆಸ್ಪತ್ರೆ ಹೆಸರುವಾಸಿಯಾಗಿದೆ ಎಂದರು.

RELATED ARTICLES  ಜಿಲ್ಲಾಮಟ್ಟದ ಚರ್ಚಾ ಸ್ಪರ್ಧೆಯಲ್ಲಿ  ಬಿ ಕೆ ಭಂಡಾರ್ಕರ ಸರಸ್ವತಿ  ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿನಿಯರ ಅಮೋಘ ಸಾಧನೆ:


ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಅರುಣ್ ಕುಮಾರ ನಾನು ನಮ್ಮ ಕರ್ತವ್ಯವನ್ನು ನಿಷ್ಡೆಯಿಂದ ಮಾಡಿದ್ದೇವೆ ಹೊರತು ಇದರಲ್ಲಿ ಯವುದೇ ವಿಶೇಷತೆಯಿಲ್ಲ. ಸನ್ಮಾನ ಮಾಡಿದ ಎಲ್ಲ ಸಾರ್ವಜನಿಕರಿಗೆ ನಾನು ಕೃತಜ್ಞನಾಗಿದ್ದೇನೆ ಎಂದರು. ವೇದಿಕೆಯಲ್ಲಿ ಸಮಾಜದ ಸೇವಕ ನಜೀರ ಕಾಶೀಂ ಇದ್ದರು.

RELATED ARTICLES  ಗೋಕರ್ಣ ಪ್ರವಾಸಕ್ಕೆ ಬರುವ ವೇಳೆ ಅಪಘಾತ: ಇಬ್ಬರು ವಿದ್ಯಾರ್ಥಿಗಳ ದುರ್ಮರಣ..!!


ಭಟ್ಕಳ ಜೆ.ಸಿ.ಐ. ಅಧ್ಯಕ್ಷ ಪಾಂಡುರಂಗ ನಾಯ್ಕ ಎಲ್ಲರನ್ನು ಸ್ವಾಗತಿಸಿ ವಂದಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಜರ್ನಲಿಸ್ಟ ಯೂನಿಯನ್ ನ ಜಿಲ್ಲಾಧ್ಯಕ್ಷ ಮನಮೋಹನ ನಾಯ್ಕ, ಕ್ರೀಯಾಶೀಲ ಗೆಳೆಯರ ಸಂಘದ ಅದ್ಯಕ್ಷ ದೀಪಕ್ ನಾಯ್ಕ, ಪ್ರಮುಖರಾದ ವೆಂಕಟೇಶ ನಾಯ್ಕ, ಮುಠ್ಟಳ್ಳಿ ವಿನಾಯಕ ನಾಯ್ಕ, ಪಾಂಡುರಂಗ ನಾಯ್ಕ, ಮಹೇಶ ನಾಯ್ಕ, ನೀಲಕಂಠ ನಾಯ್ಕ, ಗಣಪತಿ ನಾಯ್ಕ ಮುಠ್ಟಳ್ಳಿ, ಮಹಾದೇವ ನಾಯ್ಕ, ಗಣಪತಿ ನಾಯ್ಕ,ಜೆ.ಸಿ.ಐ. ಪ್ರಮುಖರಾದ ಸುರೇಶ ಪೂಜಾರಿ, ಅಬ್ದುಲ್ ಜಬ್ಬಾರ,,ವೆಂಕಟೇಶ ನಾಯಕ,ಗುರುನಾಥ ಭಟ್ ಸೇರಿದಂತೆ ವಿವಿದ ಸಂಘ ಸಂಸ್ಥೆಗಳ ಪ್ರಮುಖರ ಉಪಸ್ಥಿತರಿದ್ದರು.