ಶಿರಸಿ: ಮನೆಯಲ್ಲಿ ವಿದ್ಯಾರ್ಥಿಗಳು ಸರಿದಾರಿಗೆ ಹೋಗಬೇಕು, ನಮ್ಮ ಮಕ್ಕಳು ಸಾಧನೆ ಮಾಡಬೇಕು ಎಂದು ಬಯಸಿ ತಮ್ಮ ಮಕ್ಕಳನ್ನು ಸರಿದಾರಿಗೆ ತರುವ ಕುರಿತಾಗಿ ಯೋಚನೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಪಾಲಕರು ಕೆಲ ಮಾತುಗಳನ್ನು ಹೇಳುವುದಂಟು, ಆದರೆ ಮಕ್ಕಳು ಅಂತಹ ಮಾತುಗಳನ್ನು ಬೇರೆ ಅರ್ಥದಲ್ಲಿ ಗ್ರಹಿಸಿಕೊಂಡು ಅಥವಾ ಇನ್ಯಾವುದೋ ಕಾರಣಕ್ಕೆ ಆತ್ಮಹತ್ಯೆ ಹಾದಿ ಹಿಡಿಯುತ್ತಿರುವುದು ದುರಂತಕರ ಸಂಗತಿ. ಪುಂಡರ ಸಹವಾಸ ಮಾಡದೇ ಉತ್ತಮವಾಗಿ ಓದು ಎಂದು ಮನೆಯವರು ಹೇಳಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

RELATED ARTICLES  ಮಾಡಿದ ದಾನ- ಧರ್ಮಾದಿಗಳು ಮಾತ್ರ ನಮ್ಮ ಬೆನ್ನಿಗೆ ನಿಲ್ಲುತ್ತವೆ : ಸ್ವರ್ಣವಲ್ಲೀ ಶ್ರೀ.

ಶ್ರೀಧರ ಗುಡ್ಡಪ್ಪ ಕುರುಬರ್ ಮೃತ ವಿದ್ಯಾರ್ಥಿ. ಈತ ಧಾರವಾಡದಲ್ಲಿ ಬಿ ಎಸ್ ಸಿ ವ್ಯಾಸಂಗ ಮಾಡುತ್ತಿದ್ದ. ಕಳೆದ ಎರಡು ದಿನಗಳ ಹಿಂದೆ ಈತ ಮನೆಗೆ ಮರಳಿದ್ದ. ಆದರೆ, ಮನೆಗೆ ಬಂದ ವೇಳೆ ತಂದೆ, ಮಗನಿಗೆ ಸಹಜವಾಗಿ ಬುದ್ಧಿ ಮಾತು ಹೇಳಿದ್ದರು. ಇದರಿಂದ ಬೇಸರಗೊಂಡ ಮಗ, ಮನೆಯ ಕೋಣೆಯಲ್ಲಿ ಸಾವಿಗೆ ಶರಣಾಗಿದ್ದಾನೆ. ಈ ಕುರಿತು ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಅಂಕೋಲಾದಲ್ಲಿ ಭೀಕರ ಅಪಘಾತ : ಮಹಿಳೆಯೊರ್ವಳ ದುರ್ಮರಣ