ಅಂಕೋಲಾ : ತಾಲೂಕಿನ ಬಾಸಗೋಡದ ನಡುಬೇಣದ ಪಕ್ಕದ ಗದ್ದೆ ಬಯಲಿನಲ್ಲಿದ್ದ ಬಾವಿಯೊಂದರಲ್ಲಿ ಮಹಿಳೆಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸೂರ್ವೆ ನಿವಾಸಿ ಸುಶೀಲಾ ಗಜಾನನ ಗುನಗಾ (70) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಈಕೆ ಮನೆಯಲ್ಲಿ ಒಬ್ಬಳೇ ವಾಸವಾಗಿದ್ದಳು ಎನ್ನಲಾಗಿದೆ. ಈಕೆ ತನ್ನ ಮನೆಗೆ ಹತ್ತಿರವಿರುವ ಬಾಸಗೋಡದ ಲಕ್ಷ್ಮಣ ನಾಯಕ ಎನ್ನುವವರ ಗದ್ದೆಯ ಬಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
RELATED ARTICLES ಹುಲ್ಲಿನ ಗೊಣವೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು : ಸುಟ್ಟು ಭಸ್ಮವಾಯ್ತು 40 ಸಾವಿರ ರೂಪಾಯಿಗಳ ಹುಲ್ಲು
ಸುಮಾರು 30 ವರ್ಷಗಳ ಹಿಂದೆ ಈಕೆಯ ಪತಿ ಮನೆ ಬಿಟ್ಟು ಹೋಗಿದ್ದು ಈಕೆ ಒಬ್ಬಳೇ ಮನೆಯಲ್ಲಿ ವಾಸವಾಗಿದ್ದಳು, ವರ್ಷದಿಂದೀಚೆಗೆ ತೀವ್ರ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದು ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅಂದಾಜಿಸಲಾಗಿದೆ.
ಪಿ ಎಸ್ ಐ ಮಹಾಂತೇಶ ವಾಲ್ಮೀಕಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೋಲೀಸರು ತನಿಖೆ ನಡೆಸಿದ್ದಾರೆ.