ಕುಮಟಾ : ತಾಲೂಕಿನ ಮಾನೀರ್ ಸಮೀಪ ಎರಡು 407 ವಾಹನಗಳ ಮಧ್ಯೆ ಮುಖಾ ಮುಖಿ ಡಿಕ್ಕಿ ಸಂಭವಿಸಿದ್ದು, ಚಾಲಕ ಹಾಗೂ ನಿರ್ವಾಹಕ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡವರನ್ನು ಮಣಿಪಾಲದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗಿದೆ ಎಂದು ಸ್ಥಳೀಯ ಮಾಹಿತಿ ಲಭ್ಯವಾಗಿದೆ.

RELATED ARTICLES  ಅಭಿವೃದ್ಧಿ ನೀರಿನ ಹರಿವಿನಂತೆ ನಿರಂತರ : ಕಾಗೇರಿ.

ವಾಹನದ ಒಳಗೆ ಸಿಲಿಕಿಕೊಂಡಿದ್ದವರನ್ನು ಸಾರ್ವ ಜನಿಕರ ಮತ್ತು ಕ್ರೇನ್ ಸಹಾಯದಿಂದ ಹೊರತೆಗೆದರೆಂದು ವರದಿಯಾಗಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಅದಲ್ಲದೇ ಕೆಲ ಕಾಲ ಟ್ರಾಪಿಕ್ ಜಾಮ್ ಸಹ ಉಂಟಾಗಿತ್ತು. ಸ್ಥಳಕ್ಕೆ ಧಾವಿಸಿದ ಕುಮಟಾ CPI ತಿಮ್ಮಪ್ಪ ನಾಯ್ಕ ಮತ್ತು PSI ನವೀನ್ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

RELATED ARTICLES  ಶಾಸಕ ದಿನಕರ ಶೆಟ್ಟಿಯವರಿಂದ ಜನತಾ ದರ್ಶನ ಕಾರ್ಯಕ್ರಮ: ಜನತೆಯ ಸಮಸ್ಯೆಗೆ ಸ್ಪಂದನೆ.