ಕುಮಟಾ : ಕೊಂಕಣ ಎಜ್ಯಕೇಶನ್ ಟ್ರಸ್ಟ್ ನ ಸಭಾಭವನದಲ್ಲಿ ಜರುಗಿದ ವಿನಯಸ್ಮೃತಿ ಕಾರ್ಯಕ್ರಮದಲ್ಲಿ ಮೇದಿನಿಯ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಗಜಾನನ ಬೊಬ್ಬು ಪಟಗಾರ ಇವರಿಗೆ ಸಮರ್ಥಶಿಕ್ಷಕ ಪುರಸ್ಕಾರ ವನ್ನು ನೀಡಿಸನ್ಮಾನಿಸಲಾಯಿತು.ಈ ವೇಳೆ ಕಾರ್ಯಕ್ರಮದ ಉದ್ಘಾಟನೆ ಮಾಡಿ ಪುರಸ್ಕಾರ ಪ್ರದಾನ ಮಾಡಿದ ಉಪನಿರ್ದೇಕರು ಕಾರವಾರ ಶೈಕ್ಷಣಿಕ ಜಿಲ್ಲೆ ಈಶ್ವರ ನಾಯ್ಕ ಅವರು ಮಾತನಾಡಿ ದಿವಂಗತ ವಿನಯಾ ಶಾನಭಾಗರನ್ನು ಸ್ಮರಿಸಿ ಸಮರ್ಥ ಶಿಕ್ಷಕ ಪುರಸ್ಕಾರ ನೀಡುವ ಕಾರ್ಯಕ್ರಮ ಅತ್ಯಂತ ಅರ್ಥಗರ್ಭಿತವಾದುದು.ಯಾವುದೇ ಶಿಫಾರಸ್ಸು ಇಲ್ಲದೇ ಸಂಸ್ಥೆಯವರೇ ಗುರುತಿಸಿ ನೀಡುವ ಗೌರವಕ್ಕೆ ಬೆಲೆ ಹೆಚ್ಚು ಇತ್ತೀಚೆಗೆ ಪುರಸ್ಕಾರ ಪ್ರಶಸ್ತಿಗಳ ಬೆನ್ನೇರಿ ಹೋಗುವವರೇ ಹೆಚ್ಚು ಇದರಿಂದ ಪ್ರಾಮಾಣಿಕರು ವಂಚಿತರಾಗುತ್ತಾರೆ.ಸ್ವೀಕರಿಸುವ ಕೈಗಳಿಗಿಂತ ಕೊಡುವ ಕೈ ಶ್ರೇಷ್ಠ ಈ ದಿಸೆಯಲ್ಲಿ ಕೊಂಕಣ ಎಜ್ಯಕೇಶನ್ ಟ್ರಸ್ಟ್ ಅಭಿನಂದನಾರ್ಹ ಕೆಲಸಗಳನ್ನು ಮಾಡುತ್ತಿದೆ.ಇದು ಅತ್ಯಂತ ಅರ್ಥ ಪೂರ್ಣ ಕಾರ್ಯಕ್ರಮವಾಗಿದೆ ಎಂದು ಶ್ಲಾಘಿಸಿದರು.

ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಸಮರ್ಥ ಶಿಕ್ಷಕ ಗಜಾನನ ಪಟಗಾರ ಅವರು ತನಗೆ ಸಂದ ಈ ಪುರಸ್ಕಾರಕ್ಕೆ ನನ್ನ ಇಲಾಖೆಯ ಎಲ್ಲರೂ ಪಾಲುದಾರರು ಅವರೆಲ್ಲರ ಸಹಕಾರದಿಂದ ನಾನು ಮೇದಿನಿಯಂತ ದುರ್ಗಮ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ.ಮೇದಿನಿಯು ನಿರ್ಲಕ್ಷಿತ ಪ್ರದೇಶವಾಗದ ಹಾಗೆ ಸರಕಾರ ಇನ್ನೂ ಹೆಚ್ಚಿಗೆ ಆ ಭಾಗಕ್ಕೆ ಸ್ಪಂದಿಸಬೇಕಾಗಿದೆ.ಈ ಪುರಸ್ಕಾರ ನನ್ನ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸಿದೆ.ನನಗೆ ಸಂತೋಷವಾಗಿದೆ ಶಿಕ್ಷಣ ಕ್ಷೇತ್ರದ ಹಿರಿಯ ಅಧಿಕಾರಿಗಳಿಂದ ಹಿಡಿದು ಸಿಆರ್ ಪಿ ತನಕ ಎಲ್ಲರನ್ನೂ ಈ ವೇಳೆ ಸ್ಮರಿಸಿ ಅವರಿಗೆ ಆಭಾರಿಯಾಗಿರುವೆ ಜೊತೆಗೆ ಕೊಂಕಣ ಎಜ್ಯಕೇಶನ್ ಟ್ರಸ್ಟ್ ಗೂ ಋಣಿಯಾಗಿರುವೆ ಎಂದರು
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ದಾರ್ಮಿಕಚಿಂತಕರಾದ ಶ್ರೀರಾಮ ನಾಯಕ ಸಿ ಎ .ಬೆಂಗಳೂರು ಅವರು ಮಾತನಾಡಿ ಸನಾತನ ಪರಂಪರೆಯ ಚಿಂತನೆಗಳನ್ನು ಅಳವಡಿಸಿಕೊಂಡು ಮುನ್ನೆಡೆವ ಕೊಂಕಣದ ಕಾರ್ಯವೈಖರಿಯು ಅತ್ಯಂತ ಆನಂದದಾಯಕ ವಾದುದು ವಿನಯಸ್ಮೃತಿ ಕಾರ್ಯಕ್ರಮದ ಜೊತೆಗೆ ಕೊಂಕಣಿ ಮಾನ್ಯತಾ ದಿವಸಾಚರಣೆಯ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ ಭಾರತೀಯ ಭಾಷೆಗಳಿಗೆ ಆಧ್ಯಾತ್ಮದ ನಂಟಿದೆ ಸಂಸ್ಕೃತ ಭಾಷೆಯು ಶ್ರೇಷ್ಠ ಭಾಷೆಯಾಗಿ ದೇವ ಭಾಷೆ ಎನಿಸಿದೆ ಹೆಚ್ಚು ಹೆಚ್ಚು ಭಾಷೆಯನ್ನು ನಾವು ಕಲಿತಿರಬೇಕು ಇದರಿಂದ ನಮ್ಮ ಧೀ ಶಕ್ತಿಯು ಹೆಚ್ಚುತ್ತದೆ.ಹಿರಿಯರು ನಮಗೆ ಹೇಳಿಕೊಟ್ಟ ಎಲ್ಲಾ ಸಂಸ್ಕಾರ ಗಳಲ್ಲಿಯೂ ವಿಜ್ಞಾನ ಅಡಗಿದೆ.ಭಾರತದ ಭಾಷೆಗಳು ಉನ್ನತಿಯತ್ತ ಮಾನವರನ್ನು ಒಯ್ಯುತ್ತದೆ ಇಂದು ವಿಶ್ವವು ಭಾರತದತ್ತ ಮಾಡುತ್ತದೆ ಕೊಂಕಣಿ ಭಾಷೆಯಲ್ಲಿ ಹೆಚ್ಚು ಹೆಚ್ಚು ಸಾಹಿತ್ಯಗಳ ಸೃಜನೆ ಆಗಬೇಕು ಎಂದರು.

RELATED ARTICLES  ಕುಮಟಾ ಯುಗಾದಿ ಉತ್ಸವದ ಅಂಗವಾಗಿ ನೆಡೆದ ಭಜನಾ ಸ್ಪರ್ಧೆಯ ಫಲಿತಾಂಶ ಪ್ರಕಟ.

ಪ್ರಾಸ್ತಾವಿಕ ನುಡಿಗಳನ್ನಾಡಿದ ಮುರಳೀಧರ ಪ್ರಭು ಅವರು ದಿವಂಗತ ವಿನಯಾ ಶಾನಭಾಗ ಅವರ ಆದರ್ಶವನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಅವರೊಬ್ಬ ಆದರ್ಶ ಶಿಕ್ಷಕಿ ಪ್ರತೀವರ್ಷವೂ ಸಂಸ್ಥೆಯ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಎಲೆಮರೆಯ ಕಾಯಿಗಳನ್ನು ನಾವು ಗುರುತಿಸುವ ಕೆಲಸವನ್ನು ಮಾಡುತ್ತಿದ್ದೇವೆ.ಕೊಂಕಣಿ ಭಾಷೆಗೆ ರಾಷ್ಟ್ರಭಾಷಾ ಮಾನ್ಯತೆ ದೊರೆತ ದಿನವಾದ ಅಗಷ್ಟ 20 ರಂದು ಎಲ್ಲೆಡೆ ಸಂಭ್ರಮಾಚರಣೆ ನಡೆಯುತ್ತಿದೆ ನಮ್ಮ ಸಂಸ್ಥೆಯಲ್ಲಿ ಕೊಂಕಣಿ ಭಾಷೆಯನ್ನು ತೃತೀಯ ಭಾಷೆಯನ್ನಾಗಿ ಬೋಧಿಸಲಾಗುತ್ತಿದೆ.ಸಂತಸದ ವಿಷಯ ಎಂದರೆ ಮಾತೃ ಭಾಷೆಯಾಗಿ ಕನ್ನಡವನ್ನು ಮಾತನಾಡುವ ವಿದ್ಯಾರ್ಥಿಗಳು ಕೊಂಕಣಿ ಭಾಷೆ ಕಲಿಯುವ ಆಸಕ್ತಿಯನ್ನು ತೋರಿದ್ದಾರೆ.ಎಲ್ಲ ಭಾಷೆಗಳನ್ನೂ ಪ್ರೀತಿಸಬೇಕೆಂದು ದಿಕ್ಸೂಚಿ ನುಡಿಗಳನ್ನಾಡಿದರು.

RELATED ARTICLES  ಹೊನ್ನಾವರ : ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಕಳ್ಳತನ

ಸಂಸ್ಥೆಯ ಅಧ್ಯಕ್ಷ ವಿಠಲ ನಾಯಕ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.ವೇದಿಕೆಯಲ್ಲಿ ಸಲಹೆಗಾರರಾದ ಆರ್ ಎಚ್ ದೇಶಭಂಡಾರಿ, ಬಿ ಎಸ್ ಗೌಡ ಪ್ರಾಚಾರ್ಯ ಕಿರಣ ಭಟ್ಟ ಮುಖ್ಯ ಶಿಕ್ಷಕಿಯರಾದ ಸುಮಾ ಪ್ರಭು ,ಸುಜಾತಾ ನಾಯ್ಕ ಉಪಸ್ಥಿತರಿದ್ದರು.

ಶಿಕ್ಷಕ ಚಿದಾನಂದ ಭಂಡಾರಿ ಸ್ವಾಗತಿಸಿ ಪರಿಚಯಿಸಿದರು.ಸುಮಾ ಪ್ರಭು ವಂದಿಸಿದರು.

ಗಣೇಶ ಜೋಶಿ ವಿನಯಾ ನಾಯಕ ಗೌರೀಶ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮರು ಮೌಲ್ಯ ಮಾಪನ ದಲ್ಲಿ 625/625 ಅಂಕ ಪಡೆದ ಕುಮಾರಿ ಸಂಜನಾ ಭಟ್ಟ ಇವಳನ್ನು ಸನ್ಮಾನಿಸಲಾಯಿತು.ವಿವಿಧ ಕೊಂಕಣಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು ಕೊಂಕಣಿ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮವು ನೆರವೇರಿತು.ಸಾಹಿತಿಗಳಾದ ಎಸ್ ಪಿ ಹೆಗಡೆ ಮಂಜುನಾಥ ಗಾಂವ್ಕರ ಬರ್ಗಿ ಸುರೇಶ ಭಟ್ ಹಾಗೂ ಕಿರಣ ನಾಯ್ಕ‌ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.