ಕುಮಟಾ : ತಾಲೂಕಿನ ಮಿರ್ಜಾನಿನ ರಾಮನಗರ ನಿವಾಸಿ ಸುಬ್ರಹ್ಮಣ್ಯ ನಾಯ್ಕ ಅವರ ಮನೆಯಲ್ಲಿ ಅಪರೂಪದ ಬಿಳಿ ಹಾವು ಪ್ರತ್ಯಕ್ಷಗೊಂಡು ಸಾರ್ವಜನಿಕರಲ್ಲಿ ಗೊಂದಲವುಂಟು ಮಾಡಿತು. ಅಷ್ಟರಲ್ಲಿ ವಿಷಯ ಉರಗ ತಜ್ಞ ಪವನ್ ಎಮ್ ನಾಯ್ಕ ಅವರಿಗೆ ತಿಳಿಸಿದ್ದು, ಸ್ಥಳಕ್ಕೆ ತೆರಳಿ ಈ ಬಿಳಿ ಹಾವು ಹೆಬ್ಬಾವು ಎಂದು ಖಾತ್ರಿಪಡಿಸುವುದರೊಂದಿಗೆ ಆತಂಕ ತಿಳಿಯಾಯಿತು.

ಅಷ್ಟಕ್ಕೂ ಈ ಬಿಳಿ ಹಾವು ಎಲ್ಲಿಂದ ಬಂತು? ಎನ್ನುವುದರ ಬಗ್ಗೆ ಪವನ್ ನಾಯ್ಕ ಮಾಹಿತಿ ನೀಡಿದ್ದಾರೆ.

RELATED ARTICLES  ಮೊಬೈಲ್ ಚಾರ್ಜರ್ ಪಿನ್ ಬಾಯಿಗೆ ಹಾಕಿದ ಮಗು : ಶಾಕ್ ಹೊಡೆದು ಎಂಟು ತಿಂಗಳ ಮಗು ಸಾವು.

ಇಂತಹ ಹಾವುಗಳು ಬೇರೆಯ ಜಾತಿಯ ಹಾವಲ್ಲ. ಚರ್ಮಕ್ಕೆ ಬಣ್ಣ ನೀಡುವ ವರ್ಣ ದ್ರವ್ಯ ಗ್ರಂಥಿ ಅಂದರೆ ಮೆಲಾಲಿನ್ ಅಥವಾ ಪಿಗ್ಮೆಂಟ್ ನ ಕೊರತೆಯಿಂದ ಚರ್ಮಕ್ಕೆ ಬಣ್ಣ ಬರದೇ ಈ ರೀತಿ ಬಿಳಿ ಬಣ್ಣಕ್ಕೆ ಕಾರಣವಾಗುತ್ತದೆ. ಇದನ್ನ ಅಲ್ಬಿನೋ ಸ್ನೇಕ್ಸ್ ಎಂದು ಕೂಡಾ ಕರೆಯುತ್ತಾರೆ. ಆದರೆ ಅಲ್ಬಿನೋ ಹಾವುಗಳಾದರೆ ಕಣ್ಣು ಸಹ ಕೆಂಪು ಮಿಶ್ರಿತ ಬಿಳಿ ಬಣ್ಣ ಇರಬೇಕಾಗುತ್ತದೆ‌. ಇದರ ಕಣ್ಣು ಅರ್ಧ ಮಾತ್ರ ಬಿಳಿ ಇದ್ದು ಇನ್ನರ್ಧ ಕಪ್ಪಿರೋ ಕಾರಣ ಇದನ್ನ ಅಲ್ಬಿನೋ ಹಾವಿನ ಗುಂಪಿಗೆ ಸೇರಿಲು ಸಾಧ್ಯವಿಲ್ಲ. ಆದರೂ ಇದು ಕರ್ನಾಟಕದಲ್ಲಿ ಸಿಕ್ಕಿರೋ 2 ನೇ ದಾಖಲೆ ಹಾಗೂ ಹಾವನ್ನು ಸುರಕ್ಷಿತ ಜಾಗಕ್ಕೆ ಬಿಡಲಾಗಿದೆ ಎಂದು ಪವನ್ ನಾಯ್ಕ ಮಾಹಿತಿ ನೀಡಿದ್ದಾರೆ.

RELATED ARTICLES  ಶೀಘ್ರದಲ್ಲಿಯೇ ಬರಲಿದೆ ಫೇಸ್ ಬುಕ್ ಮೆಸೆಂಜರ್ ನಲ್ಲಿ ಗ್ರೂಪ್ ಚಾಟ್ ಜೊತೆ, ಒಟ್ಟಿಗೆ ವಿಡಿಯೋ ನೋಡುವ ಸೌಲಭ್ಯ!

ಕೃಪೆ : UKExpress