ಕಾರವಾರ: ಸಾಮಾಜಿಕ ಜಾಲತಾಣಗಳು ಎಷ್ಟು ಬಳಕೆ ಉಪಯುಕ್ತವೋ ಅಷ್ಟೇ ಅಪಾಯಕಾರಿ ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹದ ಪರಿವೇ ಇಲ್ಲದೆ ಮುಂದುವರಿಯುವಂತಹ ಜನರಿಗೆ ಮತ್ತೊಮ್ಮೆ ಎಚ್ಚರಿಕೆಯ ಗಂಟೆ ಬಾರಿಸಿದೆ. ಫೇಸ್‌ಬುಕ್ ಮೂಲಕ ಆದ ಸ್ನೇಹವನ್ನು
ನಂಬಿ, ಗಿಫ್ಟ್ ಆಸೆ ಬಲಿಯಾಗಿ ಮಹಿಳೆಯೊಬ್ಬರೂ ರು. 2.25 ಲಕ್ಷ ಕಳೆದುಕೊಂಡ ಘಟನೆ ನಡೆದಿದ್ದು, ಈ ಕುರಿತು ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯೊಬ್ಬರ ಫೇಸ್ ಬುಕ್ ಖಾತೆಗೆ ವಿದೇಶದ ಮೂಲದ ವ್ಯಕ್ತಿಯೊಬ್ಬರ ಫೇಸ್ ಬುಕ್ ಖಾತೆಯಿಂದ ಕೋರಿಕೆ ಬಂದಿತ್ತು. ಇದನ್ನು ಸ್ವೀಕರಿಸಿದ ಮಹಿಳೆಯೊಂದಿಗೆ ಫೇಸ್ ಬುಕ್ ಮೂಲಕ ಸಂದೇಶಗಳನ್ನು ಕಳುಹಿಸುತ್ತಿದ್ದ. ನಂತರ ಮಹಿಳೆ ಜತೆಗೆ ಸಲುಗೆಯಿಂದ ವಾಟ್ಸಪ್ ಸಂದೇಶಗಳನ್ನು ಕಳುಹಿಸಲು ಶುರು ಮಾಡಿದ್ದ. ನಿಮಗೆ ಒಂದು ವಿದೇಶದಿಂದ ಗಿಫ್ಟ್ ಕಳುಹಿಸಿಕೊಡುತ್ತೇನೆ, ವಿಳಾಸ ಕಳುಹಿಸಿ, ಅದರಲ್ಲಿ ಲ್ಯಾಪ್ ಟಾಪ್, ಐಫೋನ್, ಬಂಗಾರದ ಆಭರಣ ಹಾಗೂ 50 ಸಾವಿರ ಫೌಂಡ್ ಹಣ ಇರುವುದಾಗಿ ಹೇಳಿದ್ದ.
ಕಾರವಾದ ಮಹಿಳೆಗೆ ಇನ್ನೊಬ್ಬ ಮಹಿಳೆಯಿಂದ ಕರೆ ಬಂದಿದ್ದು, ತಾನೀಗ ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ಎಂದು ಹೇಳಿ, ಗಿಫ್ಟ್ ಅನ್ನು ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಬೇಕಾದರೆ ನೀವೂ 25 ಸಾವಿರ ಹಣ ಜಮೆ ಮಾಡುವಂತೆ ತಿಳಿಸಿದ್ದರು.
ನಂತರ ಹಣ ವರ್ಗಾವಣೆ ಶುಲ್ಕ, ಗಿಫ್ಟ್ ನ 50 ಸಾವಿರ ಫೌಂಡ್ ನ ಹಣದ ಬದಲಾವಣೆ ಶುಲ್ಕ ಸೇರಿದಂತೆ ಒಟ್ಟು 2.25 ಲಕ್ಷ ಹಣವನ್ನು ವಂಚಕರು ತಮ್ಮ ವಿವಿಧ ಖಾತೆಗಳಿಗೆ ಹಣ ಜಮೆ ಮಾಡಿಸಿಕೊಂಡು ಮೋಸ ಮಾಡಿದ್ದಾರೆ. ಈ ಕುರಿತು ವಂಚನೆಗೆ ಒಳಗಾಗಿರುವ ಮಹಿಳೆ ಆರೋಪಿತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ದಾಖಲಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಪ್ರಾರಂಭಿಸಿದ್ದು ಪೊಲೀಸ್ ತನಕೆಯ ನಂತರದಲ್ಲಿ ಪೂರ್ಣ ವಿವರ ಹೊರ ಬರಲಿದೆ.