ಹೊನ್ನಾವರ: ಇಲ್ಲಿ ಪಿಎಸ್‌ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅತ್ಯಂತ ಮಾನವೀಯ ಹಾಗು ದಕ್ಷ ಪೊಲೀಸ್ ಅಧಿಕಾರಿ ಎಂದು ಈವರೆಗೂ ಪ್ರಶಂಸಿಸಲ್ಪಡುತ್ತಿದ್ದ ಆನಂದಮೂರ್ತಿಗೆ ಸಿಪಿಐ – ಐಎಸ್‌ಡಿ ಬಡ್ತಿಯೊಂದಿಗೆ ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ)ಕ್ಕೆ ವರ್ಗಾಯಿಸಲಾಗಿದೆ.

ಆನಂದಮೂರ್ತಿ ಪಿಎಸ್‌ಐ ಆಗಿ ಕಾರವಾರ
ಠಾಣೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದು, ನಂತರ ಗೋಕರ್ಣ, ಹೊನ್ನಾವರ, ಹಳಿಯಾಳ ನಂತರ ಮತ್ತೆ ಹೊನ್ನಾವರಕ್ಕೆ ಪಿಎಸ್‌ಐ ಆಗಿ ಮನಃ ಬಂದವರು.

RELATED ARTICLES  ಸ್ನಾನಗೃಹದಲ್ಲಿ ನೇಣಿಗೆ ಶರಣಾದ ಮಹಿಳೆ..!

ಈ ಸುದ್ದಿಯನ್ನೂ ಓದಿ :  ಬೈಕ್ ಗೆ ಬಡಿದ ಬಸ್ : ಓರ್ವ ಸಾವು

ಪಿಎಸ್‌ಐ ಆಗಿ ಜನಸಾಮಾನ್ಯರೊಂದಿಗೆ ಹೊಸದಾದ ಮಾನವೀಯ ಸಂಸ್ಕೃತಿ ಬೆಸೆದ
ಆನಂದಮೂರ್ತಿಯವರನ್ನು ಯಾರೂ ದೂಷಿಸುವಂಥ ವಾತಾವರಣವೇ ಇರಲಿಲ್ಲ. ಅವರು ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

RELATED ARTICLES  ಕೋತಿ ಮರಿಗೆ ಕಣ್ಣೀರ ವಿದಾಯ : ಊಟ ತಿಂಡಿ ಬಿಟ್ಟು ಗೋಳಾಟ

ತನ್ನ ಸಿಬ್ಬಂದಿಗಳಾದ ಪೊಲೀಸ್ ಕಾನಸ್ಟೇಬಲ್‌ಗಳ ಬಗ್ಗೆ ಕಾಳಜಿ ಹಾಗೂ ಹೊರ ಠಾಣೆಯಿಂದ ಕಾರ್ಯ ನಿಮಿತ್ತ ಆಗಮಿಸಿದ ಪೊಲಿಸರಿಗೆ ಊಟ ಕೊಟ್ಟು ಕಳುಹಿಸುವ ಮನೋಭಾವ ಅವರದ್ದಾಗಿತ್ತು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮೂಲದ ಆನಂದಮೂರ್ತಿಯವರಿಗೆ ಉತ್ತರ ಕನ್ನಡದ ಜನರೂ ಅವರ ಭಾವನೆಗೆ ಇಷ್ಟವಾದವರಂತಿದ್ದರು.

Source : Karavali munjavu