ಕುಮಟಾ: ತಾಲೂಕಿನ ರಾ.ಹೆ 66 ರ ಹೊನ್ಮಾವ್ ಸೇತುವೆಯ ಬಳಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 14 ಜನ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ. ಪ್ರಯಾಣಿಕರ ಟೆಂಪೊ ಮತ್ತು ಕಾರು ನಡುವೆ ಈ ಡಿಕ್ಕಿ ಸಂಭವಿಸಿ, 14 ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ.ಗಾಯಗೊಂಡವರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಪ್ರಥಮ ಚಿಕಿತ್ಸೆ ನೀಡಿಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ವಾಹನಗಳ ಮುಂಭಾಗ ಜಖಂಗೊಂಡಿದೆ ಎನ್ನಲಾಗಿದೆ.

RELATED ARTICLES  ಸರಕಾರ ನೀಡುತ್ತಿರುವ ಅನುದಾನ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ: ಶಾಸಕ ಕಾಗೇರಿ

ಮಂಗಳೂರಿನಿಂದ ಕುಮಟಾ ಕಡೆ ಬರುತ್ತಿದ್ದ ಕಾರಿನ ನಿಯಂತ್ರಣ ತಪ್ಪಿ, ಪ್ರಯಾಣಿಕರನ್ನು ತುಂಬಿಕೊಂಡು ಹೊನ್ನಾವರ ಕಡೆಗೆ ತೆರಳುತ್ತಿದ್ದ ಟೆಂಪೊಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಟೆಂಪೊದಲ್ಲಿ ಪ್ರಯಾಣಿಸುತ್ತಿದ್ದ 10 ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾರ್ಯಚರಣೆ ಕೈಗೊಂಡಿದ್ದಾರೆ.

RELATED ARTICLES  ಕುಮಟಾ ವೈಭವಕ್ಕೆ ದಿನಗಣನೆ: ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಪೂರ್ಣ ವಿವರ ನೀಡಿದ ಸಮಿತಿ ಸದಸ್ಯರು.