ಅಂಕೋಲಾ: ಉತ್ತರಕನ್ನಡದಲ್ಲಿ ಯುವತಿಯರ ನಾಪತ್ತೆ ಪ್ರಕರಣಗಳು ಮತ್ತೆ ಮುಂದುವರಿಯುತ್ತಲೇ ಇದೆ. ಯುವತಿಯೋರ್ವಳು ರಾತ್ರಿ ಸಮಯದಲ್ಲಿ ಮನೆಯಿಂದ ನಾಪತ್ತೆಯಾದ ಘಟನೆ ತಾಲೂಕಿನ ಅಚವೆ ಗ್ರಾಮದ ಅಂಗಡಿಬೈಲ್‌ನಲ್ಲಿ ನಡೆದಿದೆ. ದಿವ್ಯಾ ಎಂಬುವವಳೇ ನಾಪತ್ತೆಯಾದ ಯುವತಿ ಎಂದು ವರದಿಯಾಗಿದೆ.
ಭಾನುವಾರ ರಾತ್ರಿ ಮನೆಯಲ್ಲಿ ಊಟ ಮಾಡಿಕೊಂಡು ಹೊರಗೆ ಹೋದವಳು ಮರಳಿ ಮನೆಗೆ ಬರಲಿಲ್ಲ. ಈ ಕುರಿತು ಈಕೆಯ ತಂದೆ ಶ್ರೀಧರ ನಾಯ್ಕ ಅಂಕೋಲಾ
ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.