ಕುಮಟಾ : ಪುರಾಣ ಪ್ರಸಿದ್ಧ ಶ್ರೀ ಧಾರೇಶ್ವರ ಶ್ರೀ ಧಾರಾನಾಥ ದೇವರಿಗೆ ಈ ದಿನ ಭಕ್ತರಾದ ಕುಮಟಾದ ಶ್ರೀ ರಮೇಶ ಶೇಟ್ ಹಾಗೂ ಕುಟುಂಬದವರು ರಜತ ನಾಗಾಭರಣ ಹಾಗೂ ಪೀಠಗಳನ್ನು ಸಮರ್ಪಿಸಿದರು. ಸುಮಾರು ಐದು ಕೆಜಿ ತೂಕಗಳಷ್ಟಿರುವ ಈ ಆಭರಣಗಳನ್ನು ಉಡುಪಿಯ ಶ್ರೀ ಭಾಸ್ಕರ ಶೇಟ ರವರ ತಂಡ ಅತ್ಯಂತ ಮನೋಹರವಾಗಿ ಸಿದ್ಧಪಡಿಸಿದೆ. ಈ ದಿನ ದೇವಾಲಯದಲ್ಲಿ ಎಲ್ಲಾ ಅರ್ಚಕರ ಮಾರ್ಗದರ್ಶನದಲ್ಲಿ ಮೂರ್ತಿಗಳಿಗೆ ಅಗ್ನ್ಯುತ್ತಾರಣ ಮುಂತಾದ ಸಂಸ್ಕಾರಗಳನ್ನು ಮಾಡಿ ದೇವರಲ್ಲಿ ವಿಶೇಷ ಅಭಿಷೇಕ ಪೂಜೆಗಳನ್ನು ಮಾಡಿ ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಾಲಯದ ಆಡಳಿತದ ಕಡೆಯಿಂದ ದಾನಿಗಳನ್ನು ಅಭಿನಂದಿಸಲಾಯಿತು. ಊರಿನ ಭಕ್ತಾದಿಗಳೂ ಈ ಪೂಜೆಯ ಸಂದರ್ಭದಲ್ಲಿ ಭಾಗವಹಿಸಿ ಕಣ್ತುಂಬಿಕೊಂಡರು.

RELATED ARTICLES  ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 117 ಕೊರೋನಾ ಪ್ರಕರಣ