ಭಟ್ಕಳ.: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಿಕ್ಷಕ ದಿನಾಚರಣೆಯ ಅಂಗವಾಗಿ ತಾಲೂಕಿನ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಹಾಗೂ ಉಪನ್ಯಾಸಕರಿಗಾಗಿ ಕವನರಚನಾ ಸ್ಪರ್ಧೆ ಯನ್ನು ಆಯೋಜಿಸಲಾಗಿದೆ. ಈ ವರ್ಷವನ್ನು ಸ್ವಾತಂತ್ರ್ಯೋತ್ಸವ ದ ಅಮೃತಮಹೋತ್ಸವವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ “ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವ ಸಂಭ್ರಮ” ಎಂಬ ವಿಷಯದ ಕುರಿತು ಕವನ ರಚನಾ ಸ್ಪರ್ಧೆ ಯನ್ನು ಆಯೋಜಿಸಲಾಗಿದ್ದು ಈ ಸ್ಪರ್ಧೆಯು ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ಉಪನ್ಯಾಸಕರುಗಳ ಮೂರು ವಿಭಾಗಗಳಿಗೆ ಪ್ರತ್ಯೇಕವಾಗಿ ನಡೆಯಲಿದೆ.
ಶಿಕ್ಷಕರು ಮತ್ತು ಉಪನ್ಯಾಸಕರು ತಮ್ಮ ಸ್ವರಚಿತ ಕವನಗಳನ್ನು ಮೂರು ಪ್ರತಿಯಲ್ಲಿ ನೀಡಬೇಕಿದ್ದು ಒಂದು ಪ್ರತಿಯಲ್ಲಿ ಮಾತ್ರ ತಮ್ಮ ಹೆಸರು, ವಿಳಾಸ, ಸಂಪರ್ಕ ಸಂಖ್ಯೆಯನ್ನು ನಮೂದಿಸಿ ಒಂದು ಲಕೋಟೆಯಲ್ಲಿ ತಮ್ಮ ಹೆಸರು ವಿಳಾಸ ಬರೆದು ಪ್ರಾಥಮಿಕ, ಪ್ರೌಢಶಾಲಾ ಅಥವಾ ಕಾಲೇಜು ವಿಭಾಗ ಎಂದು ಉಲ್ಲೇಖಿಸಬೇಕು.
ಕೊಣಾರ ಮತ್ತು ಭಟ್ಕಳ ನಗರ ವಲಯದ ವ್ಯಾಪ್ತಿಯ ಶಿಕ್ಷಕರು ಮತ್ತು ಉಪನ್ಯಾಸಕರು ತಮ್ಮ ಕವನಗಳನ್ನು ಸುರೇಶ ಮುರ್ಡೇಶ್ವರ, ಸಿ.ಆರ್.ಪಿ.(೯೯೭೨೭೧೨೪೯೦) ಮತ್ತು ಶಿರಾಲಿ ಮತ್ತು ಮಾವಳ್ಳಿ ವಲಯದ ವ್ಯಾಪ್ತಿಯ ಶಿಕ್ಷಕರು, ಉಪನ್ಯಾಸಕರು ನಾಗೇಶ ಮಡಿವಾಳ ಬಿ.ಆರ್.ಪಿ.(೯೪೪೮೭೫೬೯೬೭) ಇವರ ಬಳಿ ಸೆಪ್ಟೆಂಬರ್ ೨ ನೇ ತಾರೀಖಿನ ಒಳಗೆ ತಲುಪಿಸಬೇಕು. ವಿಜೇತರಿಗೆ ಸೆಪ್ಟೆಂಬರ್ ೫ರಂದು ಶಿಕ್ಷಣ ಇಲಾಖೆಯ ವತಿಯಿಂದ ನಡೆಯುವ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ ವೇದಿಕೆಯಲ್ಲಿ ಬಹುಮಾನ ವಿತರಿಸಲಾಗುವುದೆಂದು ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೮೩೧೦೦೯೩೧೯೮, ೯೧೪೧೧೧೧೬೧೧ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.