ಯಲ್ಲಾಪುರ : ಕಚ್ಚಾ ಸೇತುವೆಯ ಮೇಲೆ ಸಾಗುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಲಾರಿ ಎಂದು ನಿಯಂತ್ರಣ ತಪ್ಪಿ ನೀರಿನಲ್ಲಿ ಮಗುಚಿ ಬಿದ್ದ ಘಟನೆ ನಡೆದಿದೆ. ಯಲ್ಲಾಪುರ ತಾಲೂಕಿನ ಅರಬೈಲ್ ಬಳಿ ಗಂಗಾವಳಿ ನದಿಗೆ ಅಡ್ಡಲಾಗಿ ಪಣಸಗುಳಿ ಕಚ್ಚಾ ಸೇತುವೆ ಇದ್ದು ನೀರಿನ ಹರಿವು ಕಡಿಮೆ ಇದ್ದಾಗ ಇಲ್ಲಿ ಓಡಾಟ ನಡೆಸಲಾಗುತ್ತಿದ್ದು, ಅಲ್ಲಿಂದ ಸಾಗುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ನೀರಿನ ಸೆಳೆತಕ್ಕೆ ಸಿಲುಕಿದ ಕಾರಣ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

RELATED ARTICLES  ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ಪಾದಯಾತ್ರೆ. : ಅನಂತಮೂರ್ತಿ ಹೆಗಡೆ ನೇತ್ರತ್ವದಲ್ಲಿ ನಾಳೆಯಿಂದ ಪ್ರಾರಂಭ.

ಈ ವೇಳೆ ಲಾರಿಯಲ್ಲಿ 6 ಜನರಿದ್ದರು. ಅವರೆಲ್ಲರೂ ಅಪಾಯಕ್ಕೆ ಸಿಲುಕಿದ್ದು ಅವರನ್ನು ರಕ್ಷಣೆ ಮಾಡುವ ನೆಟ್ಟಿನಲ್ಲಿ ಗುಳ್ಳಾಪುರದಿಂದ ಬೋಟ್ ತಂದು 5 ಜನರನ್ನು ರಕ್ಷಣೆ ಮಾಡಲಾಗಿದೆ. ಇನ್ನೋರ್ವ ಲಾರಿಯ ಒಳಗೆ ಸಿಲುಕಿಕೊಂಡಿದ್ದಾನೆ ಎನ್ನಲಾಗಿದ್ದು ಆತನ ಪತ್ತೆ ಕಾರ್ಯ ಕಷ್ಟ ಸಾಧ್ಯವಾಗಿದೆ.

RELATED ARTICLES  ಎರಡು ತಲೆ ಉಳ್ಳ ಕರುವಿಗೆ ಜನ್ಮವಿತ್ತ ಹಸು:ಈ ವಿಸ್ಮಯ ನೋಡಿ ಬೆರಗಾದ ಜನ.

ವಿಡಿಯೋ..

ಅಂಕೋಲಾ ತಹಶೀಲ್ದಾರ್,ಹಾಗೂ ಯಲ್ಲಾಪುರ ತಾಲೂಕುಗಳ ಸಂಬಂಧಿತ ಕಂದಾಯ , ಪೋಲೀಸ್, ಮತ್ತಿತರ ಇಲಾಖೆಗಳ ಅಧಿಕಾರಿಯಾಗಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.