ಯಲ್ಲಾಪುರ: ಕಾರಿನಲ್ಲಿ ಅಕ್ರಮವಾಗಿ ಸಾಗವಾನಿ ತುಂಡುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ತಾಲೂಕಿನ ಆನಗೋಡ ಬಳಿ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಹುಟುಕಮನೆಯ ಅಕ್ಷಯ ಮಾದೇವ ಮರಾಠಿ ಹಾಗೂ ಸುಬ್ರಹ್ಮಣ್ಯ ಬಾಬು ಸಿದ್ದಿ ಬಂಧಿತ ಆರೋಪಿಗಳು. ಇವರು ಆನಗೋಡ ಸಮೀಪದ ದೋಣಿಗದ್ದೆ ಕಾಯ್ದಿಟ್ಟ ಅರಣ್ಯದಲ್ಲಿ ಹಸಿ ಸಾಗವಾನಿ ಕಟ್ಟಿಗೆಗಳನ್ನು ಕಡಿದು, ಕಾರಿನಲ್ಲಿ ಸಾಗಿಸುತ್ತಿದ್ದರು ಎನ್ನಲಾಗಿದ್ದು ಈ ವೇಳೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇವರಿಂದ ೨.೫೦ ಲಕ್ಷ ರೂ ಮೌಲ್ಯದ ಸಾಗವಾನಿ ತುಂಡುಗಳನ್ನು ಹಾಗೂ ಸಾಗಿಸುತ್ತಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಡಿಸಿಎಫ್ ಎಸ್.ಜಿ.ಹೆಗಡೆ, ಎಸಿಎಫ್ ಆನಂದ.ಎಚ್, ಆರ್.ಎಫ್.ಒ ಎನ್.ಎಲ್.ನದಾಫ, ಡಿ.ಆರ್.ಎಫ್.ಒಗಳಾದ ಶಿವಾನಂದ ಕಡಹಟ್ಟಿ, ಶ್ರೀನಿವಾಸ ನಾಯ್ಕ, ಬಸಲಿಂಗಪ್ಪ ಬಸಪ್ಪ, ಅಶೋಕ ಶಿರಗಾವಿ, ಸುನಿಲ್ ಜಂಗಮಶೆಟ್ಟಿ, ಅಲ್ತಾಫ ಚೌಕಡಾಕ್, ಅಶೋಕ ಹಳ್ಳಿ, ಸಂಜಯ ಬೋರಗಲ್ಲಿ, ನಾಗರಾಜ ಕಲಗುಟಕರ್, ಸಂತೋಷ ಕರಚಕಟ್ಟಿ ಇತರರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.