ಶಿರಸಿ: ಸ್ವತಂತ್ರ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾದ್ಯಂತ ೭೫ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಹಮ್ಮಿಕೊಂಡ ಭೂಮಿ ಹಕ್ಕು, ಮೂಲಸೌಕರ್ಯಕ್ಕಾಗಿ :ಹಳ್ಳಿ ಕಡೆ ನಡಿಗೆ ಜಿಲ್ಲಾಮಟ್ಟದ ಕಾರ್ಯಕ್ರಮವು ಶಿರಸಿ ತಾಲೂಕ ದೇವನಳ್ಳಿ ಗ್ರಾಮ ಪಂಚಾಯತದಲ್ಲಿ ಅಗಸ್ಟ ೨೯ ಸೋಮವಾರ ಮುಂಜಾನೆ ೯:೦೦ ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಅರಣ್ಯಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕತಿಳಿಸಿದ್ದಾರೆ.

RELATED ARTICLES  ಜನತಾ ವಿದ್ಯಾಲಯ ಮಿರ್ಜಾನ ಶಾಲೆಯಲ್ಲಿ ಭಗವದ್ಗೀತಾ ಅಭಿಯಾನ ಗೀತಾಜಯಂತಿ

ಹಳ್ಳಿ ಕಡೆ ನಡಿಗೆ ಕಾರ್ಯಕ್ರಮವು ಅಂದು ಮುಂಜಾನೆ ೯:೦೦ ಗಂಟೆಗೆ ಶಿರಸಿ ತಾಲೂಕಿನ,ದೇವನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ,ಕರೂರ ಗ್ರಾಮದ ಈಶ್ವರ ದೇವಸ್ಥಾನದ ಏದುರುಗಡೆಯಿಂದ ಪ್ರಾರಂಭಗೊAಡು ಶಿರಬೈಲ್ ಮಾರ್ಗವಾಗಿ ೭ ಕೀ.ಮೀ ದೂರ ಸಂಚರಿಸಿ ದೇವನಳ್ಳಿಗ್ರಾಮಪಂಚಾಯತದಲ್ಲಿ ೧೦:೩೦ ಕ್ಕೆಸಭೆ ಸಂಘಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಭೂಮಿ ಹಕ್ಕು ಮತ್ತು ಮೂಲ ಸೌಕರ್ಯದಸಮಸ್ಯೆಗಳನ್ನ ಸರಕಾರದ ಗಮ£ಸೆಳೆಯುವ ಉದ್ದೇಶದಿಂದ ಜಿಲ್ಲಾದ್ಯಂತ ೭೫ ಗ್ರಾಮಪಂಚಾಯತದಲ್ಲಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಆಸಕ್ತರು ಆಗಮಿಸಲು ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಕಾಗೆಗಳಿಗಾಗಿಯೇ ಚಹಾ ತಿಂಡಿ ತಯಾರಿಸಿ ಅಂಗಡಿ ಪ್ರಾರಂಭಿಸುವ ವ್ಯಕ್ತಿ: ಕುಮಟಾದಲ್ಲೊಬ್ಬ ವಿಶಿಷ್ಟ ಅಂಗಡಿಕಾರ..!!