ಶಿರಸಿ: ಇಲ್ಲಿಯ ಮದ್ಯ ಮಳಿಗೆಯಲ್ಲಿ ಮಾರಾಟವಾಗದೇ ಇದ್ದ ಅವಧಿ ಮೀರಿದ ಸುಮಾರು ೧.೦೪ ಲಕ್ಷ ರೂ. ಮೌಲ್ಯದ ೧೦೯ ಲೀಟರ್ ಮದ್ಯವನ್ನು ಅಧಿಕಾರಿಗಳ ಸಮಕ್ಷಮದಲ್ಲಿ ಎಪಿಎಂಸಿ ಉಗ್ರಾಣದ ಬಳಿ ನಾಶಪಡಿಸಲಾಯಿತು.
ಈ ಸಂದರ್ಭದಲ್ಲಿ ಅಬಕಾರಿ ಉಪ ಅಧೀಕ್ಷಕ ಎಚ್.ಎಸ್.ಶಿವಪ್ಪ, ತಹಶೀಲ್ದಾರ ಕಚೇರಿಯ ಸಿಬ್ಬಂದಿ ಜಿ.ಆರ್.ಪಾವಸ್ಕರ್, ಮದ್ಯ ಮಳಿಗೆಯ ಅಬಕಾರಿ ನಿರೀಕ್ಷಕ ಎಮ್.ಎಚ್.ತಿರುಮಲೇಶ, ಮಳಿಗೆ ವ್ಯವಸ್ಥಾಪಕ ಎಂ.ಎಸ್.ಕದA, ಸಹಾಯಕ ವ್ಯವಸ್ಥಾಪಕ ಎಂ.ಎಸ್.ಅಕ್ಕಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.