ದಾಂಡೇಲಿ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಮುಂಬಡ್ತಿ ಮೀಸಲಾತಿಯನ್ನು ಕೂಡಲೇ ಆದೇಶಿಬೇಕೆಂದು ಆಗ್ರಹಿಸಿ ಆದಿ ಜಾಂಬವಂತ ಸಂಘ, ನವಚೈತನ್ಯ ಜನಸೇವಾ ಸಂಘಟನೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ದಾಂಡೇಲಿ ಘಟಕದ ಆಶ್ರಯದಲ್ಲಿ ನಗರದ ಸೋಮಾನಿ ವೃತ್ತದಲ್ಲಿ ಮೌನ ಪ್ರತಿಭಟನೆ ನಡೆಸಿ ನಂತರ ವಿಶೇಷ ತಹಶೀಲ್ದಾರ್ ಕಚೇರಿಯ ಗೌಡಪ್ಪ ಬನಕದಿನ್ನಿಯವರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಲಾಯಿತು.

RELATED ARTICLES  ನಂಬಿಕೆ ಜೀವನಕ್ಕೆ ಅಮೃತ ಇದ್ದಂತೆ: ರಾಘವೇಶ್ವರ ಶ್ರೀ

ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ಸರಕಾರವು ಕಾನೂನುಬದ್ಧವಾಗಿ ಹೊರಡಿಸಿದ ಬಡ್ತಿ ಮೀಸಲಾತಿ ಆದೇಶವನ್ನು ತಡೆಹಿಡಿಯಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿರುವುದು ದುರದೃಷ್ಟಕರ. ಸಂವಿಧಾನಕ್ಕೆ ತಂದ ತಿದ್ದುಪಡಿ ವಯಾಪ್ತಿಯಲ್ಲಿ ಹೊರಡಿಸಲಾಗಿರುವ ಆದೇಶವನ್ನು ಹೊಡೆದು ಹಾಕುವಂತೆ ಆದೇಶ ಹೊರಡಿಸಿದೆ. ನ್ಯಾಯಬದ್ದವಾಗಿ ಸಿಗಬೇಕಿದ್ದ ಸೌಲಭ್ಯವನ್ನು ವಿಳಂಬ ಮಾಡದೇ ಈ ಹಿಂದಿನಂತೆ ಬಡ್ತಿಯಲ್ಲಿ ಮುಂದುವರಿಸಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

ಪ್ರತಿಭಟನೆಯ ನೇತೃತ್ವವನ್ನು ಆದಿ ಜಾಂಬವಂತ ಸಂಘದ ಅಧ್ಯಕ್ಷ ಚಂದ್ರಕಾಂತ.ಬಿ.ನಡಿಗೇರ, ನವಚೈತನ್ಯ ಜನಸೇವಾ ಸಂಘಟನೆಯ ಅಧ್ಯಕ್ಷ ಕಲಗುಂಡ ಸುರನಾಯ್ಕ, ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಪ್ರವೀಣ ಕೋಠಾರಿ ಹಾಗೂ ಸಂಘಟನೆಯ ಪದಾಧಿಕಾರಿಗಳಾದ ಕಮಲ, ಸರಸ್ವತಿ ಚೌವ್ಹಾಣ್, ನಾಗಮ್ಮ, ಆನಂದ, ಮಾಯಪ್ಪ, ಪ್ರವೀಣ, ಮಂಜು, ಸತೀಶ, ಪರಶುರಾಮ, ಗೋವಿಂದ, ಅಬ್ಬಾಸ, ಪ್ರೇಮ್ ಕುಮಾರ್, ದ್ಯಾಮಣ್ಣ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES  ಗಣೇಶ ವಿಸರ್ಜನೆಯಲ್ಲಿ ಕನ್ನಡ ಕಲರವ: ಆದರ್ಶ ಗಣೇಶ ವಿಸರ್ಜನೆಗೆ ಸಾಕ್ಷಿಯಾಯ್ತು ಬಗ್ಗೋಣ ಶಾಲಾ ಸಾರ್ವಜನಿಕ ಗಣೇಶೋತ್ಸವ ಸಮಿತಿ!