ಶಿರಸಿ : ಫ್ರಾನ್ಸ್‍ನ ನಾರ್ಮಂಡಿಯಲ್ಲಿ ನಡೆದ 19ನೇ ಅಂತರರಾಷ್ಟ್ರೀಯ ಸ್ಕೂಲ್ ಫೆಡರೇಶನ್ ಕ್ರೀಡೆಗಳಲ್ಲಿ ಶಿರಸಿ ಪಟ್ಟಣದ 16 ವರ್ಷದ ಪ್ರೇರಣ ನಂದಕುಮಾರ್ ಶೇಠ್ ಚಿನ್ನದ ಪದಕ ಗೆದ್ದಿದ್ದಾರೆ.
ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟಗಳಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಸ್ವರ್ಣ ಪದಕಗಳನ್ನು ಗೆಲ್ಲುವ ಮೂಲಕ ಆಕೆ ರಾಜ್ಯ ಮತ್ತು ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ರಾಷ್ಟ್ರೀಯ ಹಾಗೂ ದೇಶದ ವಿವಿಧೆಡೆ ಆಯೋಜಿಸಿರುವ ಇತರ ಟೂರ್ನಿಗಳಲ್ಲಿ 31ಕ್ಕಿಂತ ಹೆಚ್ಚು ಪದಕ ಜಯಿಸಿದ್ದಾರೆ.
ತನ್ನ 5ನೇ ವರ್ಷದಲ್ಲಿ ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿದ ಅವರು ಇಂದು 19ರ ವಯೋಮಿತಿಯ ಸಿಂಗಲ್ಸ್ ವಿಭಾಗದಲ್ಲಿ ಐದನೇ ರ್ಯಾಂಕಿಂಗ್ ಹೊಂದಿದ್ದಾರೆ. ಶಿರಸಿ ಲಯನ್ಸ್ ಇಂಗ್ಲಿಷ್ ಮೀಡಿಯಮ್ ಸ್ಕೂಲ್‍ನ ವಿದ್ಯಾರ್ಥಿನಿಯಾಗಿರುವ ಪ್ರೇರಣ, ಬ್ಯಾಡ್ಮಿಂಟನ್ ಕಾರಣದಿಂದ ಓದಿನಲ್ಲಿ ಹಿಂದುಳಿಯಬಾರದು ಎಂಬ ಕಾರಣಕ್ಕೆ ಬೈಜೂಸ್‍ನಲ್ಲಿ ವಿಶೇಷ ಕೋಚಿಂಗ್ ಪಡೆಯುತ್ತಿದ್ದರು. ಇತ್ತೀಚೆಗೆ ಪ್ರಕಟವಾದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅವರು ಶೇಕಡ 85 ಅಂಕ ಪಡೆದಿದ್ದಾರೆ.
“ಬ್ಯಾಡ್ಮಿಂಟನ್ ಅಭ್ಯಾಸ ಮತ್ತು ತರಬೇತಿಗಾಗಿ ನಾನು ವ್ಯಯಿಸುತ್ತಿದ್ದ ಸಮಯವನ್ನು ಗಮನಿಸಿದಾಗ ವಿದ್ಯಾಭ್ಯಾಸದಲ್ಲಿ ಹಿಂದೆ ಬೀಳುತ್ತೇನೆ ಎಂಬ ಆತಂಕ ಇತ್ತು. ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳಲು ಬೈಜೂಸ್ ನೆರವಾಯಿತು. ಬೈಜೂಸ್‍ನ ಪರಸ್ಪರ ಸಂವಾದಾಥ್ಮಕ ವೀಡಿಯೋಗಳು, ಮತ್ತು ವೈಯಕ್ತೀಕೃತ ಟುಟೋರಿಯಲ್ಸ್ ನಾನು ಪರಿಕಲ್ಪನೆಗಳನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳುವುದಕ್ಕೆ ನೆರವಾದುದು. ಪರೀಕ್ಷೆಯಲ್ಲಿ ಉತ್ತರವನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬ ಅರಿವನ್ನೂ ಬೈಜೂಸ್ ಮೂಡಿಸಿತು ಎಂದು ಅವರು ಹೇಳಿದ್ದಾರೆ.
ಬೈಜೂಸ್ ಸಮಗ್ರ ವ್ಯಕ್ತಿತ್ವದ ಶಿಕ್ಷಣಾರ್ಥಿಗಳನ್ನು ಸೃಷ್ಟಿಸುವ ಗುರಿಯೊಂದಿಗೆ ಅವರ ವಿಧ್ಯಾಭ್ಯಾಸದ ಜತೆಗೆ ಇತರ ಆಸಕ್ತಿಯನ್ನು ಬೆಳೆಸಿಕೊಳ್ಳಲೂ ನೆರವಾಗುತ್ತಿದೆ ಎಂದು ಸಂಸ್ಥೆಯ ಬಾತ್ಮೀದಾರರು ಪ್ರಕಟಣೆಯಲ್ಲಿ ಹೇಳಿದ್ದಾರೆ.