ಅಂಕೋಲಾ: ಬೈಕ್ ಸ್ಕಿಡ್ ಆಗಿ ಬಿದ್ದು ವ್ಯಕ್ತಿಯೋರ್ವ ಮೃತ ಪಟ್ಟ ಘಟನೆ ತಾಲೂಕಿನ ಮಂಜಗುಣಿ ರಸ್ತೆಯ ಸಿಂಗನಮಕ್ಕಿ ಬಳಿ ಸಂಭವಿಸಿದೆ. ತಾಲೂಕಿನ ಹನುಮಟ್ಟ ನಿವಾಸಿ ಮಾರುತಿ ಬೀರಪ್ಪಾ ನಾಯ್ಕ (54) ಮೃತ ವ್ಯಕ್ತಿಯಾಗಿದ್ದು ಪಟ್ಟಣದ ಲೋಕೋಪಯೋಗಿ ಇಲಾಖೆ ಐ.ಬಿಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಈತ ಮಂಜಗುಣಿ ಕಡೆಯಿಂದ ಅಂಕೋಲಾ ಕಡೆ ಬರುತ್ತಿದ್ದ ಸಂದರ್ಭದಲ್ಲಿ ಸಿಂಗನಮಕ್ಕಿ ಬಳಿ ನಾಯಿ ಅಡ್ಡ ಬಂದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದು ಗದ್ದ ಮತ್ತು ಎದೆಯ ಭಾಗಗಳಿಗೆ ಗಂಭೀರ ಗಾಯಗಳಾದ ಕಾರಣ ಕಾರವಾರ ಆಸ್ಪತ್ರೆಗೆ ಸಾಗಿಸುತ್ತಿರುವ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿ ಅವರ್ಸಾ ಬಳಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.