ಕುಮಟಾ : ಕರ್ನಾಟಕ ಸರ್ಕಾರವು ಜಿಲ್ಲಾ ಹಿಂದೂ ದೇವಸ್ಥಾನಗಳಿಗೆ ವ್ಯವಸ್ಥಾಪನ ಸಮಿತಿ ನೇಮಕ ಮಾಡಲು ಮುಂದಾಗಿದೆ. ಈ ಕ್ರಮವನ್ನು ವಿರೋಧಿಸಿ ಕುಮಟಾದ ಖಾಸಗಿ ಹೊಟೆಲೊಂದರಲ್ಲಿ ಕುಮಟಾ ತಾಲೂಕಿನ ಕೆಲವು ದೇವಾಲಯದ ಆಡಳಿತ ಮಂಡಳಿ ಮೊಕ್ತೆಸರಗಳು ಒಟ್ಟಾಗಿ ಸುದ್ದಿಗೊಷ್ಠಿ ಹಮ್ಮಿಕೊಂಡಿದ್ರು.

ಈ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಮತ್ತು ತಾಲೂಕಾ ಧಾರ್ಮಿಕ ಮಹಾ ಮಂಡಳಿ ಅಧ್ಯಕ್ಷರಾದ ನಾಗೇಶ ಶಾನಬಾಗ್ ಕರ್ನಾಟಕ ಸರಕಾರವು ಸಂವಿಧಾನ ಬಾಹಿರ ಎಂದು ರದ್ದುಗೊಂಡಿರುವ ಕಾಯ್ದೆಯನ್ನು ತಡೆಯಾಜ್ಞೆಯ ನೆಪದಲ್ಲಿ ತರಾತುರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ತ ಮುಖಾಂತರ ಅನುಷ್ಠನಗೋಳಿಸುವ ಪ್ರಯತ್ನ ಮಾಡಿದೆ. ಇದು ನಮ್ಮ ಜಿಲ್ಲೆಯ ಧಾರ್ಮಿಕ ಮಂಡಳಿಗೆ ನೋವನ್ನುಂಟುಮಾಡಿದೆ,ನ್ಯಾಯಲಯದಲ್ಲಿ ಈ ಪ್ರಕರಣವು ಅಂತಿಮ ವಿಚಾರ ಆಗುವ ಮೊದಲೇ ದೇವಸ್ಥಾನಗಳ ಮೇಲೆ ಹತೋಟಿ ಸಾಧಿಸುವ ಹಠವನ್ನು ಸರಕಾರ ಏಕೆ ಮಾಡುತ್ತಿದೆ ಎಂದು ಪ್ರಶ್ನಿಸಿದ್ರು? ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದ ಅವರು ಈ ಕ್ರಮವನ್ನು ವಿರೋಧಿಸಿ ಜಿಲ್ಲೆಯಾದ್ಯಂತ ಹೋರಾಟ ಮಾಡುವ ನಿರ್ಧಾರ ಮಾಡಲಾಗಿದೆ ಎಂದರು.

RELATED ARTICLES  ಏ. 17 ರಂದು ಹೆಗಡೆಕಟ್ಟಾ ದಲ್ಲಿ ಭರತನಾಟ್ಯ ಕಾರ್ಯಕ್ರಮ 

ಈ ಸುದ್ದಿಗೊಷ್ಠಿಯಲ್ಲಿ ಆರ್.ವಿ ಭಟ್. ಎ.ಆರ್.ನಾಯ್ಕ.ಎನ್.ವಿ ಸಬಾಹಿತ್,ಲಕ್ಷ್ಮಣ ಪ್ರಭು,ಜಿ.ಕೆ.ಪಟಗಾರ ಮುಂತಾದವರು ಉಪಸ್ಥಿತರಿದ್ದರು..