ಕುಮಟಾ : “ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾ”, ಉತ್ತರಕನ್ನಡ ಶಾಖೆ ಕುಮಟಾ, ವತಿಯಿಂದ ಸರಕಾರಿ ಹೈಸ್ಕೂಲ್ ನೆಲ್ಲಿಕೆರಿ ನಲ್ಲಿ ಹದಿಹರೆಯ ವಯೋಮಾನದ ಮಕ್ಕಳಲ್ಲಿ ಉಂಟಾಗುವ ತಲ್ಲಣಗಳ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.

ಹದಿಹರೆಯ ಅವಧಿಯಲ್ಲಿ ಮಕ್ಕಳಲ್ಲಿ ದೈಹಿಕ, ಭಾವನಾತ್ಮಕ, ಸಾಮಾಜಿಕ, ಮಾನಸಿಕ ಬದಲಾವಣೆ ಉಂಟಾಗುವುದರ ಜೊತೆಗೆ ಕೋಪ, ನಿರಾಶೆ, ಆಧುನಿಕತೆಗಳ ತುಮುಲ, ಕಲಿಕೆಯಲ್ಲಿ ಉಂಟಾಗುವ ತೊಂದರೆಗಳು, ಬೇಸರ, ಪ್ರೀತಿಯ ಕೊರತೆ, ದುಖಃ, ಮೇಲರಿಮೆ, ಕೀಳರಿಮೆ, ಕಂಪ್ಯೂಟರ್ ಗೀಳು, ನೈತಿಕ ದ್ವಂದ್ವಗಳು, ನಕಾರಾತ್ಮಕ ಧೋರಣೆ, ಅನಗತ್ಯ ತೊಡಕುಗಳಲ್ಲಿ ಸಿಲುಕಿಕೊಳ್ಳುವುದು ಹದಿಹರೆಯದ ಲಕ್ಷಣ ಎಚಿದು ಕಾರ್ಯಕ್ರಮದ ಉಪನ್ಯಾಸಕರದ ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾ ಕುಮಟಾ ಬ್ರಾಂಚ್‌ನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ವಿ.ಐ.ಹೆಗಡೆಯವರು ಉಪನ್ಯಾಸ ನೀಡಿದರು.

RELATED ARTICLES  ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟ

ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾದ ಬೆಳವಣಿಗೆಯ ಹಂತ & ಲಭಿಸುವ ಸೇವೆಗಳ ಕುರಿತು “ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೆಷನ್ ಆಪ್ ಇಂಡಿಯಾ ಕುಮಟಾ ಬ್ರಾಂಚ್‌ನ ಕಾರ್ಯಕ್ರಮಾಧಿಕಾರಿ ಶ್ರೀಮತಿ ಮಂಜುಳಾ ಗೌಡ ಪ್ರಾಸ್ತಾವಿಕ ಮಾತನಾಡಿದರು.

RELATED ARTICLES  ಲೈಟ್ ಅಳವಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರದ ಸೇವಾ ಸಂಘ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯಾಧ್ಯಾಪಕರಾದ ಶ್ರೀ ಶಿವಾನಂದ ಜಿ ಭಟ್ಟ ರವರು ಅಧ್ಯಕ್ಷೀಯ ಮಾತನಾಡಿದರು. ಸರಕಾರಿ ಹೈಸ್ಕೂಲ್ ನೆಲ್ಲಿಕೆರಿಯ ಶಿಕ್ಷಕರಾದಂತಹ ಶ್ರೀಮತಿ ಮಂಜುಳಾರವರು ಸ್ವಾಗತಿಸಿದರು ಶ್ರೀಮತಿ ಪುಷ್ಪಾರವರು ವಂದಿಸಿದರು.

ಸರಕಾರಿ ಹೈಸ್ಕೂಲ್ ನೆಲ್ಲಿಕೆರಿಯ ಶಿಕ್ಷಕವೃಂದದವರು ಉಪಸ್ಥಿತರಿದ್ದರು.