ಯಲ್ಲಾಪುರ : ಪಣಸಗುಳಿಯಲ್ಲಿ ಗಂಗಾವಳಿ ನದಿಗೆ ಲಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದ ಸಂದೀಪ್ ಮೃತದೇಹ ಪತ್ತೆಯಾಗಿದೆ.ಲಾರಿ ಬಿದ್ದ ಸ್ಥಳದಿಂದ ಸುಮಾರು 2.5 ಕಿ.ಮೀ ದೂರದ ರಾಮನಗುಳಿ ಗ್ರಾಮದ ಹತ್ತಿರ ಮೃತದೇಹ ಸಿಕ್ಕಿದೆ.

ನಿನ್ನೆಯಷ್ಟೇ ಎಸ್ ಡಿ ಆರ್ ಎಫ್ ಹಾಗೂ ಅಗ್ನಿಶಾಮಕ ತಂಡ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಇದೀಗ ಘಟನೆ ನಡೆದ ಸುಮರು 2.5 ಕಿಮೀ ದೂರದಲ್ಲಿ ಸಂದೀಪ್ ಮೃತದೇಹ ಪತ್ತೆಯಾಗಿದೆ. ಘಟನೆಯ ಹಿನ್ನೆಲೆ ಬುಧವಾರ ಸಂಜೆ ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ ಚಾಲಕ ಸೇತುವೆ ಮೇಲೆ ಲಾರಿ ಚಲಾಯಿಸಿಕೊಂಡು ಹೋಗಿ ಲಾರಿ ನದಿಗೆ ಬಿದ್ದು ದುರಂತ ಸಂಭವಿಸಿತ್ತು.

RELATED ARTICLES  "ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ" : ಸಂತೇಗುಳಿ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು.

ಲಾರಿಯಲ್ಲಿದ್ದ 6 ಜನರ ಪೈಕಿ ಐವರನ್ನು ಗುಳ್ಳಾಪುರದ ಬೋಟ್ ಚಾಲಕರು ತಕ್ಷಣ ಸ್ಥಳಕ್ಕೆ ಬಂದು ರಕ್ಷಿಸಿದ್ದರು. ಆದರೆ ಲಾರಿಯಲ್ಲಿದ್ದ ಸಂದೀಪ್ ಪತ್ತೆಯಾಗಿರಲಿಲ್ಲ. ಈತನಿಗಾಗಿ ರಕ್ಷಣಾ ತಂಡದಿಂದ ತೀವ್ರ ಶೋಧ ಮುಂದುವರೆದಿತ್ತು. ಇದೀಗ ಸಂದೀಪ್ ಮೃತದೇಹ ಸಿಕ್ಕಿದೆ.

RELATED ARTICLES  ಶಿರಸಿಯಲ್ಲಿ ಬೆಂಕಿಗೆ ಬಲಿಯಾದ ಶಿಕ್ಷಕ: ನಡೆಯಿತು ಹೃದಯ ವಿದ್ರಾವಕ ಘಟನೆ.