ಭಟ್ಕಳ : ಸಮಾಜ ಎಷ್ಟೇ ಬೆಳೆಯುತ್ತಿದ್ದರೂ ಸಹ ಪ್ರಮಾಣಿಕತೆ ಮೆರೆಯುವ ಜನರು ಅಲ್ಲಲ್ಲಿ ತಮ್ಮ ಪ್ರಾಮಾಣಿಕತೆಯ ಪ್ರದರ್ಶನದಿಂದ ಜನತೆಗೆ ಮಾದರಿಯನಿಸಿಕೊಳ್ಳುತ್ತಾರೆ. ಇಂಥಹುದೇ ಒಂದು ಘಟನೆ ಭಟ್ಕಳದಲ್ಲಿ ನಡೆದಿದೆ.

ರಸ್ತೆಯಲ್ಲಿ ಸಿಕ್ಕಿದ ನಗದುಳ್ಳ ಪರ್ಸ್ ನ್ನು ಮರಳಿ ವಾರಸುದಾರರಿಗೆ ಒಪ್ಪಿಸುವ ಮೂಲಕ ಭಟ್ಕಳ ಗ್ರಾಮೀಣ ಠಾಣೆಯ ಸಿ.ಪಿ.ಐ ಚಾಲಕ ದೇವರಾಜ ಮೊಗೇರ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ. ತಾಲೂಕಿನ ರಘುನಾಥ ರಸ್ತೆ ಮೂಲಕ ಠಾಣೆಗೆ ತೆರಳುವ ವೇಳೆ 3500 ನಗದು ಹಾಗೂ ವ್ಯಕ್ತಿಯ ದಾಖಲೆವುಳ್ಳ ಪರ್ಸ್ ಸಿ.ಪಿ.ಐ ಚಾಲಕ ದೇವರಾಜ ಮೊಗೇರ ಅವರಿಗೆ ಸಿಕ್ಕಿತ್ತು.ನಂತರ ಪರ್ಸ್ ನಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿ ಕಳೆದುಕೊಂಡ ವ್ಯಕ್ತಿಯನ್ನು ಸಂಪರ್ಕಿಸಿದ್ದಾರೆ.

RELATED ARTICLES  ಹಣಕ್ಕಾಗಿ ವ್ಯಕ್ತಿಯನ್ನು ಅಪಹರಿಸಿದವರು ಅರೆಸ್ಟ್.

ನಂತರ ಪರ್ಸ್ ಕಳೆದುಕೊಂಡ ವ್ಯಕ್ತಿಯನ್ನು ಪತ್ತೆ ಮಾಡಿದ್ದು,  ತಾಲೂಕಿನ ರಘುನಾಥ ರಸ್ತೆಯ ಮಟ್ಕುಳಿ ನಿವಾಸಿ ಭಾಸ್ಕರ ನಾಯ್ಕ ಎಂದು ತಿಳಿದು ಬಂದಿದೆ. ಬಳಿಕ ಅವರನ್ನು ಭಟ್ಕಳ ಗ್ರಾಮೀಣ ಠಾಣೆಗೆ ಕರೆಯಿಸಿಕೊಂಡ ಸಿ.ಪಿ.ಐ ಮಾಹಾಬಲೇಶ್ವರ ನಾಯ್ಕ ಅವರು ಪರ್ಸ
ವಾರಸುದಾರರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮರೆದಿದ್ದಾರೆ.

RELATED ARTICLES  ಮಲೆನಾಡ ಪುಣ್ಯಕ್ಷೇತ್ರ: ಮೃಗವಧೆ

ಸಿ.ಪಿ.ಐ ಚಾಲಕ ದೇವರಾಜ ಮೊಗೇರ ಅವರ ಕಾರ್ಯಕ್ಕೆ ಪರ್ಸ ಮಾಲೀಕ ಧನ್ಯವಾದ ಕೋರಿದ್ದು, ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.