ಭಟ್ಕಳ : ಕಳೆದ ವರ್ಷ ತಾಲೂಕಿನ ವೆಂಕಟಾಪುರ ಹೆಗ್ಗಲುವಿನಲ್ಲಿ ಕಾಣಿಸಿಕೊಂಡಿದ್ದ ಮೊಸಳೆ ಇದೀಗ ಕಳೆದ 3 ವಾರಗಳಿಂದ ಮತ್ತೆ ಅದೇ ಜಾಗದಲ್ಲಿ ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.  ಹಿಂದಿನ ಬಾರಿ ಮೊಸಳೆ ಕಾಣಿಸಿಕೊಂಡು ಮೊಸಳೆಯಿಂದಾಗಿ ಸುತ್ತ ಮುತ್ತಲ ಜನರು ಆತಂಕ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

RELATED ARTICLES  ಕಾಟಾಚಾರ ಮರೆತು ಹೊರಹೊಮ್ಮಿದ ಕಲಿಕೆಯ ವಿನೂತನ ಕಾಳಜಿ : ಒಂದನೇ ತರಗತಿಯಿಂದಲೇ ಇಂಗ್ಲೀಷ್ ಕಲಿಕೆ ಬೇಕು -ಎನ್.ಆರ್.ಗಜು

ಸರಿಸುಮಾರು 5-6 ಅಡಿ ಉದ್ದ ಇರುವ ಈ ಮೊಸಳೆ ಕಳೆದ ಬಾರಿಯಂತೆ ನೀರು ಇಳಿತದ ಸಂದರ್ಭದಲ್ಲಿ ಮರಳಿನ ಜಾಗವನ್ನೇರಿ ಬಿಸಿಲಿಗೆ ಮೈಯೊಡ್ಡಿ ನಂತರ ನೀರಿಗೆ ಇಳಿದು ಮಾಯವಾಗುತ್ತಿದೆ. ಇದರಿಂದಾಗಿ ಜನರು ಓಡಾಟದ ಸಂದರ್ಭದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿದೆ.

RELATED ARTICLES  ಕನ್ನಡ ಸಂಘ ಹೆಮ್ಮರವಾಗಿ ಬೆಳೆಯಲಿ: ಡಾ.ಎಮ್.ಆರ್.ನಾಯಕ

ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೊಸಳೆ ಕಳೆದ ಒಂದು ವರ್ಷದಿಂದ ಹೆಗ್ಗಲು ಭಾಗದಲ್ಲಿ ಓಡಾಡಿಕೊಂಡಿರುವುದು ವಿಭಿನ್ನ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆನ್ನುವುದು ಸಾರ್ವಜನಿಕರ ಅಹವಾಲಾಗಿದೆ.