ಕುಮಟಾ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಸನ್ಮಾನ್ ಹೊಟೇಲ್ ಎದುರಿನಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದ‌ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಅಂಕೋಲಾ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಲಿ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಅಪಘಾತದಿಂದ‌ ರಸ್ತೆಯಲ್ಲಿಯೇ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದಾನೆ. ಹಿಟ್ ಆಂಡ್ ರನ್ ಪ್ರಕರಣ ಇದಾಗಿದೆ. ಅಪಘಾತ ಪಡಿಸಿದ ಲಾರಿ ಚಾಲಕನನ್ನು ಸಾರ್ವಜನಿಕರು ಬೆನ್ನಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ.

RELATED ARTICLES  ನವರಾತ್ರಿ ವಿಶೇಷ ಶ್ರೀಕಾಂಚಿಕಾ ಪರಮೇಶ್ವರಿ ದೇವಾಲಯದ ರಥಬೀದಿಯಲ್ಲಿ 'ಸಪ್ತ ಯಕ್ಷ ಸೌರಭ ಕಾರ್ಯಕ್ರಮ'.

ಸಾವನ್ನಪ್ಪಿದ ವ್ಯಕ್ತಿಯನ್ನು ಸರ್ಕಾರಿ ತಾಲೂಕಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಮೃತ ವ್ಯಕ್ತಿ ಮಾನಸಿಕ ಅಸ್ವಸ್ತ ಎನ್ನಲಾಗಿದ್ದು, ಈತ ಕಳೆದ ಕೆಲ ತಿಂಗಳಿನಿಂದ ಪಟ್ಟಣ ವ್ಯಾಪ್ತಿಯಲ್ಲಿ ತಿರುಗಾಡುತ್ತಿದ್ದ. ಆದರೆ ವ್ಯಕ್ತಿ ಯಾರು ಎಲ್ಲಿಂದ ಬಂದವನು ಎಂಬ ಬಗ್ಗೆ ಅಧಿಕೃತವಾಗಿ ಮಾಹಿತಿ ಲಭ್ಯವಾಗಿಲ್ಲ. ಯಾರಿಗಾದರೂ ಈ ಕುರಿತು ಮಾಹಿತಿ ಇದ್ದಲ್ಲಿ ನಿಮ್ಮ ಹತ್ತಿರದ ಪೊಲೀಸ್ ಠಾಣೆ ಅಥವಾ ಕುಮಟಾ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ಕೋರಲಾಗಿದೆ.

RELATED ARTICLES  ಪರೀಕ್ಷೆಗಾಗಿ ಪೇಪರ್ ತರಲು ಹೋದ ಬಾಲಕ ಸೈಕಲ್ ಸ್ಕಿಡ್ ಆಗಿ ಬಿದ್ದು ಸಾವು.