ಶಿರಸಿ: ಅಕ್ರಮವಾಗಿ ಶ್ರೀಗಂಧವನ್ನು ಮಾರಾಟ ಮಾಡಲು ಸಂಚು ರೂಪಿಸಿದ್ದ ವ್ಯಕ್ತಿಯೋರ್ವನನ್ನು ಶಿರಸಿ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ, ಆರೋಪಿತನಿಂದ 2.10 ಕೆ.ಜಿ. ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ.

ಮಹೇಶ ಲಕ್ಷ್ಮಣ ಮೊಗೇರ ಸಹ್ಯಾದ್ರಿ ತಗ್ಗು ಪುಟ್ಟನ ಮನೆ (32) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಈತ ಶ್ರೀಗಂಧದ‌ ತುಂಡುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಎಂದು ಹೇಳಲಾಗಿದೆ.

RELATED ARTICLES  ಟ್ಯಾಂಕರ್ ಹಾಗೂ ಲಾರಿ ನಡುವೆ ಅಪಘಾತ

ಈ ಕುರಿತು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು, ಆರೋಪಿಯನ್ನು ಬಂಧಿಸಿ ಆತನಿಂದ ಶ್ರೀಗಂಧದ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಬಿ.ಎಫ್.ಓ. ಡಾ. ಅಚ್ಚಯ್ಯ ಹಾಗೂ ಎ.ಸಿ.ಎಫ್. ಅಶೋಕ ಹಲಗೂರ ಇವರ ಮಾರ್ಗದರ್ಶನದಲ್ಲಿ ಆರ್.ಎಫ್.ಓ. ಶಿವಾನಂದ ನಿಂಗಾಣಿ, ಸಿಬ್ಬಂದಿಗಳಾದ ಎಮ್.ಆರ್. ನಾಯ್ಕ, ಧನಂಜಯ್ ನಾಯ್ಕ, ರಾಜೇಶ ಕೋಠಾರಕರ, ಪ್ರಕಾಶ ಲಮಾಣಿ ಹಾಗು ಇನ್ನಿತರರು ಪಾಲ್ಗೊಂಡಿದ್ದರು.

RELATED ARTICLES  ಪುನೀತನ ಜೊತೆ ಕುಳಿತ ಗಣಪ : ವಿಭಿನ್ನ ಕಲ್ಪನೆಗೆ ಜನ ಮೆಚ್ಚುಗೆ