ಕುಮಟಾ: ಪಟ್ಟಣದ ಕಡ್ಲೆ ಮೈದಾನದಲ್ಲಿ ಆ.26 ಶುಕ್ರವಾರದಂದು ನಡೆದ ಪದವಿ ಪೂರ್ವ ಕಾಲೇಜುಗಳ ಕುಮಟಾ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕೊಂಕಣ ಎಜುಕೇಷನ್ ಸೊಸೈಟಿಯ ಸರಸ್ವತಿ ಪದವಿ ಪೂರ್ವ ಕಾಲೇಜು, ಕಲಭಾಗ ಕುಮಟಾದ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದು ಕಾಲೇಜಿನ ಹಾಗೂ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಹೆಣ್ಣು ಮಕ್ಕಳ ವಿಭಾಗದಲ್ಲಿ ಕು. ಚಾರ್ವಿ ಗುಂಡು ಎಸೆತ, ಚಕ್ರ ಎಸೆತ ಮತ್ತು ಸರಪಳಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನದೊಂದಿಗೆ ವಯಕ್ತಿಕ ವೀರಾಗ್ರಣಿಯನ್ನು ಪಡೆದಿದ್ದಾಳೆ. ಕು. ಸೊನಾಲಿ ಚಕ್ರ ಎಸೆತ ತೃತೀಯ ಸ್ಥಾನ ಪಡೆದಿದ್ದಾಳೆ. ಗುಂಪು ಆಟಗಳಾದ ವಾಲಿಬಾಲ್ ನಲ್ಲಿ ಪ್ರಥಮ, ಕಬಡ್ಡಿ ಮತ್ತು ತ್ರೋಬಾಲ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

RELATED ARTICLES  ಮನೆ ಮನೆಗೆ ಕಾಂಗ್ರೇಸ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ. ಇತರ ಪಕ್ಷಗಳಲ್ಲಿ ತಳಮಳ!

ಗಂಡು ಮಕ್ಕಳ ವಿಭಾಗದಲ್ಲಿ ಕು. ವಿನುತ ಗುಂಡು ಎಸೆತ ಪ್ರಥಮ ಮತ್ತು ಚಕ್ರ ಎಸೆತ ತೃತೀಯ, ಕು. ಪ್ರಥಮ್ 100 ಮೀ. ಮತ್ತು 200 ಮೀ. ಓಟದಲ್ಲಿ ದ್ವೀತಿಯ ಸ್ಥಾನ, ಕು. ಪವನ್ 400 ಮೀ. ಓಟದಲ್ಲಿ ದ್ವೀತಿಯ ಸ್ಥಾನ, ಗುಂಪು ಆಟಗಳಾದ ಕಬಡ್ಡಿಯಲ್ಲಿ ಪ್ರಥಮ ಹಾಗೂ ತ್ರೋಬಾಲ್ ನಲ್ಲಿ ದ್ವೀತಿಯ ಸ್ಥಾನ ಪಡೆದಿದ್ದಾರೆ.

RELATED ARTICLES  ಪ್ರವಾಸಕ್ಕೆ ಬಂದವನು ಸಮುದ್ರದಲ್ಲಿ ಕಣ್ಮರೆ..!

ವಿದ್ಯಾರ್ಥಿಗಳ ಈ ಅದ್ಭುತ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ವಿಶ್ವಸ್ಥರು, ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಕಿರಣ ಭಟ್ಟ, ಉಪ ಪ್ರಾಂಶುಪಾಲೆ ಶ್ರೀಮತಿ ಸುಜಾತಾ ಹೆಗಡೆ, ಕ್ರೀಡಾ ಸಂಯೋಜಕರಾದ ದೀಪಕ್ ನಾಯ್ಕ ಹಾಗೂ ಎಲ್ಲಾ ಉಪನ್ಯಾಸಕ ಮತ್ತು ಉಪನ್ಯಾಸಕೇತರ ಸಿಬ್ಬಂದಿ ವರ್ಗದವರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.