ಭಟ್ಕಳ-ಕೆ.ಆರ್.ಎಸ್ ಪಕ್ಷದ ಕರ್ನಾಟಕ ರಾಜ್ಯಾದ್ಯಂತ ಲಂಚಮುಕ್ತ ಅಭಿಯಾನದ ಕಾರ್ಯಕ್ರಮದ ಪ್ರಯುಕ್ತ ಭಟ್ಕಳಕ್ಕೆ ಆಗಮಿಸಿದ ಕೆ.ಆರ್.ಎಸ್ ಪಕ್ಷದ ರಾಜ್ಯ ಅಧ್ಯಕ್ಷ , ಭ್ರಷ್ಟಾಚಾರ ವಿರೋಧಿ ಹೋರಾಟಗಾರ ರವಿಕೃಷ್ಣ ರೆಡ್ಡಿ ಅವರು ಭಟ್ಕಳದಲ್ಲಿ ಅಕ್ರಮವಾಗಿ ಯಾರ ಭಯವಿಲ್ಲದೆ ರಾಜಾರೋಷವಾಗಿ ತಾಲೂಕ ಪಂಚಾಯತ್ನ ವಾಣಿಜ್ಯ ಮಳಿಗೆಯ ಸರಕಾರಿ ಕಟ್ಟಡದಲ್ಲಿ ನಡೆಯುತಿರುವ ಮಟ್ಕಾ ಬುಕ್ಕಿಗಳ ಮಟ್ಕಾ ಕಚೇರಿ ವಿರುದ್ಧ ಗುಡುಗಿದರು ಮತ್ತು ಸರಕಾರಿ ಕಟ್ಟಡವನ್ನು ಅಕ್ರಮ ದಂಧೆ ಮಟ್ಕಾ ದಂಧೆ ನಡೆಸಲು ಬಾಡಿಗೆ ನೀಡಿರುವ ಭಟ್ಕಳ್ ತಾಲೂಕ ಪಂಚಾಯತ್ ಕಾರ್ಯನಿರ್ವಾಹನಾಧಿಕಾರಿ ಸಹಿತ , ಅಕ್ರಮ ದಂದೆ ನಡೆಸುತ್ತಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಭಟ್ಕಳದ ತಾಲೂಕ ಪಂಚಾಯತನ ವಾಣಿಜ್ಯ ಮಳಿಗೆ ಕಟ್ಟಡವನ್ನು ಮಟ್ಕಾ ಬುಕ್ಕಿಗಳು ಬಾಡಿಗೆ ಪಡೆದು, ತಮ್ಮ ಮಟ್ಕಾ ದಂಧೆಯ ಕಚೇರಿಯನ್ನು ಮಾಡಿಕೊಂಡಿದ್ದಾರೆ, ಈ ಅಕ್ರಮ ಚಟುವಟಿಕೆಗಳಿಗೆ ಸರ್ಕಾರಿ ಕಟ್ಟಡವನ್ನು ಬಾಡಿಗೆ ನೀಡ ಬಾರದು ಈ ಕೂಡಲೇ ಕ್ರಮ ಕೈಗೊಳಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಅಧ್ಯಕ್ಷ ರವಿ ಕೃಷ್ಣ ರೆಡ್ಡಿ ಅವರು ಭಟ್ಕಳ ತಾಲೂಕ ಪಂಚಾಯತ್ ಗೆ ಬೇಟಿ ನೀಡಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.