ಅಂಕೋಲಾ: ಪುರೋಹಿತ ಕೆಲಸ ಮಾಡುತ್ತ ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿ ಹೆಸರಾಗಿದ್ದ, ಉದಯೋನ್ಮುಖ ಕವಿಯಾಗಿ ಸಿಂಧೂರ ಕಾವ್ಯನಾಮದ ಅಡಿಯಲ್ಲಿ ಹಲವಾರು ಕವಿತೆಗಳನ್ನು ಬರೆದು ಮೆಚ್ಚುಗೆ ಪಡೆದಿದ್ದ ಅಂಕೋಲಾ ತಾಲೂಕಿನ ಕಲ್ಲೇಶ್ವರ ಮೂಲದ ಗುರುಪ್ರಸಾದ್ ರಾಮಚಂದ್ರ ಗಾಂವಕರ್ ಪೂಜಾ ಕಾರ್ಯ ಮುಗಿಸಿ ಯಲ್ಲಾಪುರದ ಹಾಲಿ ವಾಸಸ್ಥಳಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವಾಹನ ಬೈಕಿಗೆ ಡಿಕ್ಕಿ ಹೊಡೆದು ಮೃತ ಪಟ್ಟ ಘಟನೆ ರಾ.ಹೆ 63 ರ ಯಲ್ಲಾಪುರದ ಅರಬೈಲ್ ಬಳಿ ಸಂಭವಿಸಿದೆ.

RELATED ARTICLES  ಕಂಟೇನರ್ ಹಾಗೂ ಕಲ್ಲು ಲಾರಿ ಮತ್ತು ಪ್ಯಾಸಂಜರ್ ಟ್ಯಾಂಪೋ ನಡುವೆ ಮಂಕಿ ಬಳಿ ಭೀಕರ ಅಪಘಾತ!

ಗುರುಪ್ರಸಾದ್ ಗಾಂವಕರ ಬೈಕ್ ನಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದ ಅದಾವುದೋ ವಾಹನ ಅತಿ ವೇಗವಾಗಿ ಇವರ ಬೈಕ್ ಗೆ ಡಿಕ್ಕಿ ಪಡಿಸಿ ಸ್ಥಳದಿಂದ ನಾಪತ್ತೆ ಆಗಿದೆ.

RELATED ARTICLES  ಗೋಕರ್ಣದ ಪ್ರಧಾನ ತಂತ್ರಿಗಳಾಗಿದ್ದ ಶ್ರೀ ಶಿತಿಕಂಠ ಹಿರೇ ಇನ್ನಿಲ್ಲ.

IMG 20220827 WA0006

ಅಪಘಾತದ ರಭಸಕ್ಕೆ ಬೈಕನಿಂದ ಸಿಡಿದು ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದು, ರಸ್ತೆ ಅಪಘಾತಕ್ಕೆ ನಿಖರ ಕಾರಣ ಮತ್ತು ಅಪಘಾತ ಪಡಿಸಿದ ವಾಹನದ ಕುರಿತು ಪೊಲೀಸ ದೂರು ಮತ್ತು ತನಿಖೆ ಬಳಿಕವಷ್ಟೇ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.