ಕುಮಟಾ : 2023-24ನೇ ಸಾಲಿನ ಪ್ರತಿಷ್ಠಿತ ರೋಟರಿ ಉಪಪ್ರಾಂತಪಾಲ ಹುದ್ದೆಗೆ ಕುಮಟಾದ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ರೊಟೇರಿಯನ್ ವಸಂತ ರಾವ್ ಆಯ್ಕೆಯಾಗಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ತಮ್ಮನ್ನು ತೆಗೆದುಕೊಂಡು, ರೋಟರಿ ಸೇರಿದಂತೆ, ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಮಾಜಮುಖಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ತಮ್ಮದೇ ಆದ ಕಂಪನಿಯೊಂದನ್ನು ಸ್ಥಾಪಿಸುವುದರ ಮೂಲಕ ಕುಮಟಾ ಹಾಗೂ ಹುಬ್ಬಳ್ಳಿಯಲ್ಲಿ ಇದರ ಶಾಖೆಗಳನ್ನು ಹೊಂದಿ ಉತ್ತಮ ರೀತಿಯಲ್ಲಿ ಕಂಪನಿಯನ್ನು ನಡೆಸುತ್ತಿದ್ದು ಬಡವರಿಗೆ ಹಾಗೂ ಅಗತ್ಯ ಇರುವವರಿಗೆ ದಾನ ಮಾಡುವುದರ ಮೂಲಕ ದಾನಿಗಳಾಗಿ ಇವರು ಗುರುತಿಸಿಕೊಂಡವರು.
ಕುಮಟಾದ ರೋಟೋರಿಯ ಕಾರ್ಯದರ್ಶಿಯಾಗಿ ಅಧ್ಯಕ್ಷರಾಗಿ ಹಾಗೂ ವಿವಿಧ ಹುದ್ದೆಗಳನ್ನು ಅಲಂಕರಿಸಿ ಜವಾಬ್ದಾರಿ ನಿರ್ವಹಿಸಿ ರೋಟರಿಯಲ್ಲಿಯೂ ತಮ್ಮದೇ ಆದಂತಹ ಚಾಪು ಮೂಡಿಸಿದವರು. ಸತ್ವಾಧಾರ ಫೌಂಡೇಶನ್ ನ ದಿಗ್ದರ್ಶಕರಾಗಿ ಹಾಗೂ ಇತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾಗಿ ಇವರು ಸಾಮಾಜಿಕವಾಗಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.
ಇವರನ್ನು ರೋಟರಿ ಸಂಸ್ಥೆ ಗುರುತಿಸಿದ್ದು ಇವರು ಉಪ ಪ್ರಾಂತಪಾಲ ಹುದ್ದೆಗೆ ಆಯ್ಕೆಯಾದ ಬಗ್ಗೆ ಸಂತಸ ವ್ಯಕ್ತಪಡಿಸಿ, ಕುಟುಂಬದವರು ಹಾಗೂ ಹಿತೈಷಿಗಳು ಶುಭ ಹಾರೈಸಿದ್ದಾರೆ.