ಕುಮಟಾ : ಶ್ರಾವಣ ಮಾಸವೆಂದರೆ ಹಬ್ಬಗಳ ಸಾಲು ಸಾಲು ಈ ಮಾಸದಲ್ಲಿ ಪ್ರತಿದಿನವೂ ಒಂದೊಂದು ವಿಶೇಷ, ಅದೇ ರೀತಿಯಲ್ಲಿ ಶ್ರಾವಣ ಮಾಸದ ಕೊನೆಯ ದಿನ ವಿಶೇಷ ದಿನವಾಗಿ ಆಚರಿಸಲ್ಪಡುತ್ತದೆ. ಅದೇ ರೀತಿ ಪಟ್ಟಣದ ಅಧಿದೇವತೆ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೆಯ ವಿಶೇಷ ಪೂಜೆ ಸಾವಿರಾರು ಭಕ್ತಾಧಿಗಳ ಪಾಲ್ಗೊಳ್ಳುವಿಕೆಯಲ್ಲಿ ಸಂಪನ್ನಗೊಂಡಿತು.

RELATED ARTICLES  ಸಿದ್ದಾಪುರದ ಬಾನ್ಕುಳಿ ಮಠದಲ್ಲಿ ನಡೆಯುತ್ತಿದೆ 'ಶಂಕರ ಪಂಚಮಿ'

ಶ್ರಾವಣ ಮಾಸದ ಕೊನೆಯ ದಿನ ಕುಮಟಾ ಪಟ್ಟಣದ ಅಧಿದೇವತೆ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀದೇವಿಯನ್ನು ವಿವಿಧ ಪರಿಮಳ ಭರಿತ ಪುಷ್ಪಗಳಿಂದ ಶೃಂಗರಿಸಲಾಗಿತ್ತು.ಭಕ್ತರು ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ತೆರಳಿ ಹಣ್ಣುಗಾಯಿ ಸೇವೆ ಸಲ್ಲಿಸಿದರು.

ಸಹಸ್ರ ಕುಂಕುಮಾರ್ಚನೆ, ಸಹಸ್ರ ಪುಷ್ಪಾರ್ಚನೆ, ದುರ್ಗಾ ನಮಸ್ಕಾರ ಸೇರಿದಂತೆ ವಿವಿಧ ದೈವಿ ಕೈಂಕರ್ಯಗಳು ನೆರವೇರಿದವು. ಮುತೈದೆಯರು ಅರಿಶಿಣಕುಂಕುಮ ಸೇವೆ ಗೈದು, ಪರಸ್ಪರ ವಿನಿಮಯ ಮಾಡಿಕೊಂಡರು. ಸಂಜೆ ನಡೆದ ಭಜನಾ ಕಾರ್ಯಕ್ರಮ ನೆರೆದ ಭಕ್ತರಲ್ಲಿ
ಭಕ್ತಿಯ ರೋಮಾಂಚನ ಮೂಡಿತು.

RELATED ARTICLES  ಜಿಲ್ಲಾ ಸ್ಕೌಟ್‌ನ ಪಬ್ಲಿಕ್ ರಿಲೇಶನ್ ಆಫೀಸರ್ (ಪಿ.ಆರ್.ಒ) ಆಗಿ ಎಸ್.ಎಸ್.ಭಟ್ಟ ಲೋಕೇಶ್ವರ

ಸಾವಿರಾರು ಭಕ್ತರು ದೇವರಲ್ಲಿ ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು. ಮಹಾ ಮಂಗಳಾರತಿ ಬಳಿಕ ಭಕ್ತರಿಗೆ ತೀರ್ಥ-ಪ್ರಸಾದ ವಿತರಿಸಲಾಯಿತು. ಭಕ್ತಿಪರಶರಾಗಿ ದೇವಿಯ ಸೇವೆ ಮಾಡಿ ಸೇವಕರ್ತರು ಧನ್ಯತಾ ಭಾವ ಹೊಂದಿದರು.