ಅಯೋಧ್ಯೆ ರಾಮಜನ್ಮಭೂಮಿಗಾಗಿ ನಡೆದಿದ್ದ ದಶಕಗಳ ಹೋರಾಟಕ್ಕೆ ಇದೀಗ ಜಯ ಸಿಗುವ ಕಾಲ ಸಮೀಪವಾಗ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಸದ್ಯ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, 2024ರ ಜನವರಿ 14ಕ್ಕೆ ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿರಾಜಮಾನನಾಗಲಿದ್ದಾನೆ. ಇದೇ ಸಂತಸದ ಸಂದರ್ಭದಲ್ಲಿ ಖುಷಿಯನ್ನು ದ್ವಿಗುಣಗೊಳಿಸುವಂತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಾಮಮಂದಿರದ ಗರ್ಭಗುಡಿಯ ಫೋಟೋಗಳನ್ನ ಹಂಚಿಕೊಂಡಿದೆ. ಮಾತ್ರವಲ್ಲದೆ ಶೀಘ್ರದಲ್ಲೇ ರಾಮಲಲ್ಲಾನ ದರ್ಶನ ಸಿಗಲಿದೆ ಅನ್ನೋ ಸಿಹಿ ಸುದ್ದಿ ನೀಡಿದೆ.

ಆಗಸ್ಟ್​ 5, 2020… ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮಮಂದಿರ ನಿರ್ಮಾಣಕ್ಕೆ ಅದ್ದೂರಿಯಾಗಿ ಅಡಿಗಲ್ಲು ಹಾಕಿದ್ರು. ಕೋಟಿ ಕೋಟಿ ಹಿಂದೂಗಳ ದಶಕಗಳ ಕನಸಾದ ಉತ್ತರಪ್ರದೇಶದ ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ರು. ಸುಮಾರು ಐದು ಎಕರೆ ಜಾಗದಲ್ಲಿ ನಿರ್ಮಾಣವಾಗ್ತಿರೋ ಶ್ರೀರಾಮನ ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ರು.

RELATED ARTICLES  ಯುವಕನೊಬ್ಬ ಮೆಟ್ರೋ ರೈಲು ಹಳಿಗೆ ಹಾರಿ ಆತ್ಮಹತ್ಯೆ ಪ್ರಯತ್ನ.

ರಾಮಜನ್ಮಭೂಮಿ ಅಂತ ಸಾಬೀತು ಮಾಡೋಕೆ ನಡೆದ ಹೋರಾಟದ ಫಲವಾಗಿ ಅಂದು ಚಾಲನೆಗೊಂಡ ರಾಮನ ಆಲಯದ ಕಾರ್ಯ ಭರದಿಂದ ಸಾಗಿದೆ. ಇನ್ನು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ ಜೂನ್​ನಲ್ಲಿ ಚಾಲನೆ ನೀಡಿದ್ದ ಗರ್ಭಗುಡಿಯ ಕಾಮಗಾರಿ ಕೂಡ ವೇಗವಾಗಿ ನಡೆಯುತ್ತಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಗರ್ಭಗುಡಿ ನಿರ್ಮಾಣ ಕಾರ್ಯ ಡಿಸೆಂಬರ್ 2023 ರೊಳಗೆ ಪೂರ್ಣಗೊಳ್ಳುತ್ತೆ ಅನ್ನೋ ಭರವಸೆ ವ್ಯಕ್ತಪಡಿಸಿದೆ.

ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಸುಮಾರು 5 ಎಕರೆ ಪ್ರದೇಶದಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡಲಾಗ್ತಿದೆ. ಮಂದಿರದ ಅಡಿಪಾಯ ಹಾಕುವ ವೇಳೆ ಅಡಿಪಾಯದಲ್ಲಿ 40 ಕೆಜಿ ತೂಕದ ಬೆಳ್ಳಿಯ ಇಟ್ಟಿಗೆ ಅಳವಡಿಕೆ ಮಾಡಲಾಗಿದೆ. 1990ರಲ್ಲಿ ದೇಶದ 3.5 ಲಕ್ಷ ಗ್ರಾಮಗಳಿಂದ ಸಂಗ್ರಹಿಸಿದ್ದ ಇಟ್ಟಿಗೆಗಳನ್ನ ಮಂದಿರಕ್ಕೆ ಬಳಕೆ ಮಾಡಲಾಗ್ತಿದೆ. ಅಲ್ಲದೇ ರಾಮ್​ಘಾಟ್​ ಕಾರ್ಯಗಾರದಲ್ಲಿ ಸಂಗ್ರಹಿಸಿದ್ದ ರಾಮಶಿಲೆಗಳನ್ನ ಕೂಡ ಬಳಸಲಾಗ್ತಿದೆ. ಗರ್ಭಗುಡಿಯ ನಿರ್ಮಾಣಕ್ಕೆ ರಾಜಸ್ಥಾನದ ಮಾರ್ಬಲ್​ಗಳನ್ನ ಬಳಸಿದ್ದು, ಮುಖ್ಯ ಕಟ್ಟಡಕ್ಕೆ 4.7 ಲಕ್ಷ ಕ್ಯೂಬಿಕ್​ ಮೀಟರ್​ಗಳಷ್ಟು ಕಲ್ಲುಗಳನ್ನ ಬಳಸಲಾಗಿದೆ.

RELATED ARTICLES  ನಾಳೆ ಉತ್ತರಕನ್ನಡದಲ್ಲಿ ಅತೀ ಹೆಚ್ಚು ಕೊರೋನಾ ಲಸಿಕೆ‌ ಲಭ್ಯ

ಇನ್ನು ಸದ್ಯದ ಮಾಹಿತಿಗಳ ಪ್ರಕಾರ, 2024ರ ಜನವರಿ 14 ರಂದು ರಾಮಲಲ್ಲಾನ ವಿಗ್ರಹ ಅಯೋಧ್ಯೆಯ ಹೊಸ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದೆ. ಅದರೊಂದಿಗೆ 508 ದಿನಗಳಲ್ಲಿ ಮೂರು ದಶಕಗಳ ಕನಸು ನನಸಾಗಲಿದೆ.ಸದ್ಯ ರಾಮಮಂದಿರದ ಗರ್ಭಗುಡಿಯ ಫೋಟೋಗಳನ್ನ ಟ್ವಟರ್​ನಲ್ಲಿ ಹಂಚಿಕೊಂಡಿರೋ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್​​​, ರಾಮಮಂದಿರದ ಸುಂದರ ವಿನ್ಯಾಸವನ್ನ ಅನಾವರಣ ಮಾಡಿದೆ.

ಒಟ್ಟಾರೆ ಎಲ್ಲ ಅಂದುಕೊಂಡಂತೆ ಆದ್ರೆ 2023ರ ಡಿಸೆಂಬರ್​ ಅಂತ್ಯಕ್ಕೆ ರಾಮಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡು ಶತಕೋಟಿ ಹಿಂದೂಗಳ ಆರಾಧ್ಯದೈವ ಶ್ರೀರಾಮ ಆರೂಢರಾಗಲಿದ್ದಾನೆ. 2024ರ ವೇಳೆಗೆ ಅಯೋಧ್ಯೆಯಲ್ಲಿ ರಾಮಲಲ್ಲಾ ಭಕ್ತರಿಗೆ ದರ್ಶನ ನೀಡಲಿದ್ದಾನೆ.

Source : News1