ಕಾರವಾರ: ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿಪ್ಪಾಣಿ ಬಳಿ ಶನಿವಾರ ಮಧ್ಯಾಹ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ವಾಹನದ ಚಾಲಕ ಮತ್ತು ಕ್ಲಿನರ್ ಇಬ್ಬರು ತೀವ್ರ ಅಪಘಾತಕ್ಕೆ ಒಳಗಾಗಿದ್ದು ಸರಿಯಾದ ಸಮಯದಲ್ಲಿ ಅವಶ್ಯವಿದ್ದ ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸುವುದರಲ್ಲಿ ಶಿರಸಿಯ ವೈದ್ಯ ದಂಪತಿಗಳಾಗಿರುವ ಡಾ.ದಿನೇಶ ಹೆಗಡೆ ಮತ್ತು ಡಾ.ಸುಮನ್ ಹೆಗಡೆ ಪ್ರಮುಖ ಪಾತ್ರ ವಹಿಸಿದ್ದಾರೆ.

RELATED ARTICLES  ಪತ್ನಿಯನ್ನು ಅನುಮಾನಿಸಿದ ಪತಿ..? ಆತ್ಮಹತ್ಯೆ ಮಾಡುಕೊಂಡ ಪತ್ನಿ.

ನಿಪ್ಪಾಣಿಯ ಸಮೀಪದ ಹೊಟೆಲೊಂದರಲ್ಲಿ ವೈದ್ಯ ದಂಪತಿಗಳು ಊಟ ಮಾಡುತ್ತಿದ್ದ ವೇಳೆಗೆ ಅವರ ಕಣ್ಣೆದುರಲ್ಲೇ ಭಾರೀ ಪ್ರಮಾಣದ ಎಕ್ಸಿಡೆಂಟ್ ನಡೆದ ಪರಿಣಾಮ ಡ್ರೈವರ್ ಹಾಗು ಕ್ಲೀನರ್ ಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಊಟವನ್ನು ಅರ್ಧಕ್ಕೆ ನಿಲ್ಲಿಸಿ ಸ್ಥಳಕ್ಕೆ ತೆರಳಿದ ಡಾ.ದಿನೇಶ ಹೆಗಡೆ ದಂಪತಿ ಗಾಯಾಳುವಿಗೆ ತುರ್ತು ಪ್ರಾಥಮಿಕ ಚಿಕಿತ್ಸೆ ನೀಡಿ, ಮಾನವೀಯತೆ ಮೆರೆದಿದ್ದಾರೆ.

RELATED ARTICLES  ದಾರಿ ತೋರಲು ಹೋದಾತನೇ ನೀರು ಪಾಲಾದ.

ನಂತರ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ. ವೈದ್ಯ ದಂಪತಿಯ ಈ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಅಪಾರ ಅಭಿನಂದನೆ ಸಲ್ಲಿಸಿದ್ದಾರೆ. ರೋಟರಿ ಸಂಸ್ಥೆ ಮೂಲಕ ಮತ್ತು ವಯಕ್ತಿಕವಾಗಿ ತಮ್ಮ ಸಾಮಾಜಿಕ ಕಾರ್ಯದ ಮೂಲಕ ಜಿಲ್ಲೆಯಲ್ಲಿ ಡಾ.ದಿನೇಶ್ ಹೆಗಡೆ ಹಾಗು ಡಾ.ಸುಮನ್ ಹೆಗಡೆ ಹೆಸರು ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.