ಹೊನ್ನಾವರ: ತಾಲೂಕಿನ ಪೊಲೀಸ್ ಠಾಣಿಯ ಪಿಎಸೈ ಆಗಿ ಸಾವಿತ್ರಿ ನಾಯಕ ಅಧಿಕಾರ ಸ್ವೀಕರಿಸಿದ್ದಾರೆ. 1995ರಂದು ಪೊಲೀಸ್ ಕಾನಸ್ಟೇಬಲ್ ಆಗಿ ಇಲಾಖೆಗೆ ಸೇರ್ಪಡೆಯಾಗಿ ಬೆಂಗಳೂರಿನಲ್ಲಿ ವೃತ್ತಿ ಜೀವನ ಆರಂಭಿಸಿದರು. ನಂತರ ಜಿಲ್ಲೆಗೆ ಆಗಮಿಸಿ ಹೆಡ್ ಕಾನಸ್ಟೇಬಲ್, ಎಎಸೈ ಆಗಿ ಸಿದ್ದಾಪುರ, ಕುಮಟಾ, ಹೊನ್ನಾವರ, ಕಾರವಾರದಲ್ಲಿ ಸೇವೆ ಸಲ್ಲಿಸಿ ಕರಾವಳಿ ಕಾವಲು ಪಡೆಗೆ ಪಿಎಸೈ ಆಗಿ ಬಡ್ತಿ ಹೊಂದಿದರು.
ನಂತರ ಹೊನ್ನಾವರ, ಕಾರವಾರದಲ್ಲಿ ಸೇವೆ ಸಲ್ಲಿಸಿ ಇದೀಗ ಹೊನ್ನಾವರದಲ್ಲಿ ಮತ್ತೆ ಸೇವೆ ಸಲ್ಲಿಸಲು ಆಗಮಿಸಿದ್ದಾರೆ. ಇವರು ಹೊನ್ನಾವರದಲ್ಲಿ ಕೈಂ ವಿಭಾಗದಲ್ಲಿ ಪಿಎಸೈ ಆಗಿರುವಾಗ 25ಕ್ಕೂ ಅಧಿಕ ಪ್ರಕರಣ ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಸಿಬ್ಬಂದಿಗಳ ಸಹಕಾರದ ಮೇರೆಗೆ ಭೇದಿಸುವಲ್ಲಿ ಯಶ್ವಸಿಯಾಗಿದ್ದರು.
ಮಹಿಳಾ ಅಧಿಕಾರಿಯಾಗಿ ಕಾಸರಕೋಡ ಟೊಂಕಾ ಮೀನುಗಾರರ ಹೋರಾಟ ಸಮಯದಲ್ಲಿ ಮಹಿಳಾ ಸಿಬ್ಬಂದಿಗೆ ಬಂದೋಬಸ್ತ್ ಸಮಯದಲ್ಲಿ ಸೂಕ್ತ ಮಾಹಿತಿಯ ಮೇರೆಗೆ ಪರಿಸ್ಥಿತಿ ವಿಕೋಪಕ್ಕೆ ತಲುಪದಂತೆ ಎಚ್ಚರ ವಹಿಸುವ ಮೂಲಕ ಇಲಾಖೆಯಿಂದ ಪ್ರಶಂಸೆಗೂ ಪಾತ್ರರಾಗಿದ್ದರು.