ಕುಮಟಾ: ಕಳೆದ ಅನೇಕದಿನದಿಂದ ಮಾನಸಿಕ ಅಸ್ವಸ್ಥತೆಯಿಂದ ಕುಮಟಾ ಪಣ್ಣದಲ್ಲಿ ಭಿಕ್ಷೆಬೇಡಿಕೊಂಡು ದಿನ ಸಾಗಿಸುತ್ತಿದ್ದ ಸುಮಾರು 50 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಗೆ ಕೆಲ ದಿನದ ಹಿಂದಷ್ಟೇ ಗ್ಯಾಸ್ ಟ್ಯಾಂಕರ್ ಒಂದು ಅಪಘಾತ ಪಡಿಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಘಟನೆ ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಮಣಕಿ ಮೈದಾನದ ಸಮೀಪದಲ್ಲಿರುವ ಸನ್ಮಾನ್ ಹೊಟೇಲ್ ಎದುರು ನಡೆದಿತ್ತು.
ಆದರೆ ಇದುವರೆಗೆ ಮೃತ ವ್ಯಕ್ತಿಯ ಕುರಿತಾಗಿ ಅಥವಾ ಈತನ ಕುಟುಂಬಸ್ಥರ ಕುರಿತಾಗಿ ಯಾವುದೇ ಮಾಹಿತಿ ದೊರೆತಿಲ್ಲವಾಗಿದೆ. ಹೀಗಾಗಿ ಈ ವ್ಯಕ್ತಿಯ ರಕ್ತ ಸಂಭoದಿಗಳ ಕುರಿತಾಗಿ ಅಥವಾ ಇವರ ಕುರಿತು ಯಾವುದೇ ಮಾಹಿತಿ ಸಿಕ್ಕಲ್ಲಿ ಕೂಡಲೇ ಕುಮಟಾ ಪೊಲೀಸ್ ಠಾಣೆಯ ದೂರವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ತಿಳಿಸಲಾಗಿದೆ. ಕುಮಟಾ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08386-222333, 9480805272