ಹೊನ್ನಾವರ: ಕಳೆದ 12 ವರ್ಷದ ಹಿಂದೆ ಪಟ್ಟಣದಲ್ಲಿ ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ ನೇಪಾಳದ ಜನಕ ಬಹಾದ್ದೂರ್ ಜಯಬಹಾದ್ದೂರ್ ಭಂಡಾರಿಯನ್ನು ಹೊನ್ನಾವರ ಪೊಲೀಸರು ಕಾರವಾರ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹೊನ್ನಾವರದ ಕೋರ್ಟ್ ರಸ್ತೆಯ ಕಾಂಪ್ಲೆಕ್ಸ್‌ನಲ್ಲಿರುವ ಮುನ್ಸಿಪಾಲಿಟಿ ಶ್ರೀಕುಮಾರ ರೋಡ್‌ಲೈನ್ಸ್ ಕಛೇರಿಯ ಶೆಟರ್ಸ್ ಬಾಗಿಲಿನ ಬೀಗ ಮುರಿದು ಒಳಹೊಕ್ಕಿ ಒಳಗಿದ್ದ ಲೆನೋವಾ ಕಂಪನಿಯ ಲ್ಯಾಪ್‌ಟಾಪ್‌ನ್ನು ಕಳುವು ಮಾಡಿದ್ದಲ್ಲದೇ, ಅದರ ಪಕ್ಕದ ವಿ.ಎಮ್. ಭಂಡಾರಿ ವಕೀಲರ ಕಛೇರಿ ಮತ್ತು ಡಾ. ಮನೋಜ ನಾಯ್ಕ
ಇವರ ಕ್ಲಿನಿಕ್‌ನ ಶೆಟರ್ಸ್ ಬಾಗಿಲಿನ ಬೀಗ ಮುರಿದು ಒಳ ಹೊಕ್ಕಿ ಕಳವು ಮಾಡಲು ಯತ್ನಿಸಿದ ಬಗ್ಗೆ ಸದಾನಂದ ಮಹಾಬಲೇಶ್ವರ ನಾಯ್ಕ ದೂರು ನೀಡಿದ್ದರು.

RELATED ARTICLES  ಗ್ರಾ.ಪಂ ಚುನಾವಣೆಗೂ ಕೋವಿಡ್-೧೯ ಎಸ್‌ಓಪಿ ಕಡ್ಡಾಯ; ಡಿಸಿ

ಈತ ನೇಪಾಳ ನಿವಾಸಿಯಾಗಿದ್ದು, ಈತನ ಸಂಬಧಿಕರು ಉಡುಪಿಯಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದಾರೆ. ಆಗಾಗ ಉಡುಪಿಗೆ ಬರುತ್ತಿದ್ದ ಈತ ಜಿಲ್ಲೆಯ ಬೇರೆ ಬೇರೆ ಕಡೆ ಕಳ್ಳತನ ಮಾಡುವ ಕಸುಬು ರೂಢಿ ಮಾಡಿಕೊಂಡಿದ್ದ. ಇತ್ತೀಚಿಗೆ ಮುರುಡೇಶ್ವರದಲ್ಲಿಯೂ ಕಳ್ಳತನ ಮಾಡಿದ್ದ ಎಂದು ತಿಳಿದುಬಂದಿದೆ. ಈತ ಕಾರವಾರದಿಂದ ದೆಹಲಿಗೆ ಹೋಗಲು ಸಂಬಧಿಕರೊಂದಿಗೆ ಕಾರವಾರ ರೈಲ್ವೆ ನಿಲ್ದಾಣದಲ್ಲಿ ರೈಲಿನ ಬರುವಿಕೆಗೆ ಕಾಯುತ್ತಿದ್ದಾಗ ಪೊಲೀಸ್ ಬಲೆಗೆ ಬಿದ್ದಿದ್ದಾನೆ.

RELATED ARTICLES  ಇಂದಿನ(ದಿ-07/03/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.