ಕಾರವಾರ: ಫೋಟೋಗ್ರಾಫಿ ಹಾಗೂ ವಿಡಿಯೋಗ್ರಫಿಯಲ್ಲಿ ತನ್ನದೇ ಆದ ಸಾಧನೆ ಮಾಡುತ್ತಿರುವ ಕುಮಟಾದ ಗೋಪಿ, ಇದೀಗ ಪ್ರಶಸ್ತಿಯನ್ನು ತಮ್ಮ ಮುಡುಗೇರಿಸಿಕೊಳ್ಳುವುದರ ಮೂಲಕ ಸಾಧನೆ ಮುಂದುವರೆಸಿದ್ದಾರೆ. ವಿಭಿನ್ನ ರೀತಿಯ ಫೋಟೋಗ್ರಫಿ ಹಾಗೂ ಫೋಟೋಗ್ರಾಫಿಯಲ್ಲಿ ಹೊಸತನವನ್ನು ತುಂಬಿದ ಗೋಪಿ ಜಾಲಿ ಕುಮಟಾ ಹಾಗೂ ಉತ್ತರ ಕನ್ನಡ ಅಷ್ಟೇ ಅಲ್ಲದೆ ರಾಜ್ಯ ರಾಷ್ಟ್ರಮಟ್ಟದಲ್ಲಿಯೂ ತಮ್ಮನ್ನ ಗುರುತಿಸಿಕೊಂಡಿರುವುದು ವಿಶೇಷ.
ದೆಹಲಿಯಲ್ಲಿ ನಡೆದ ಲಲಿತಕಲಾ ಅಕಾಡೆಮಿಯಲ್ಲಿ ಆಜಾದಿ ಕಾ ಅಮೃತಮಹೋತ್ಸವ ಹಾಗೂ ವರ್ಲ್ಡ್ ಫೋಟೋಗ್ರಾಫಿ ದಿನದ ಛಾಯಾಚಿತ್ರವನ್ನು ಪ್ರದರ್ಶನದಲ್ಲಿ ಉತ್ತರಕನ್ನಡದ ಹೆಮ್ಮೆಯ ಫೋಟೋಗ್ರಾಫರ್ ಗೋಪಿ ಜಾಲಿಯವರ ಚಿತ್ರ ಪ್ರಶಸ್ತಿ ಪಡೆದಿದೆ.
ಬರೋಬ್ಬರಿ 1603 ಚಿತ್ರಗಳು ಬಂದಿದ್ದು ಅದರೊಳಗೆ 135 ಆಯ್ಕೆಯಾಗಿ ಪ್ರದರ್ಶನಗೊಂಡಿದ್ದವು, ಅದರಲ್ಲಿ ಅತ್ಯುತ್ತಮವಾದ 5 ಚಿತ್ರಗಳನ್ನು ಆಯ್ಕೆಮಾಡಿ ಪ್ರಶಸ್ತಿ ನೀಡಲಾಯಿತು.
ಈ 5 ಚಿತ್ರಗಳಲ್ಲಿ ಗೋಪಿ ಜಾಲಿಯವರು ತೆಗೆದ ಮಿರ್ಜಾನ್ ಕೋಟೆಯಲ್ಲಿ ನಡೆದ ಧ್ವಜಾರೋಹಣ ಚಿತ್ರಕ್ಕೆ ಬಹುಮಾನ ದೊರೆತಿದ್ದು ಹೆಮ್ಮೆಯ ವಿಷಯ. ಇವರ ಸಾಧನೆಗೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ.