ಯಲ್ಲಾಪುರ : ಆರ್ ಎಸ್ ಎಸ್ ರಾಷ್ಟ್ರೀಯ ವ್ಯವಸ್ಥಾಪಕ್ ಪ್ರಮುಖ ಶ್ರೀಯುತ ಮಂಗೇಶ್ ಬಂಡೆಯವರ ಕಾರು ಅಪಘಾತವಾಗಿದೆ ಎಂದು ವರದಿಯಾಗಿದೆ. ಎಲ್ಲಾಪುರ ಹೊರವಲಯದ ಆನ್ಗೋಡ್ ಕ್ರಾಸ್ ಬಳಿ ಅಪಘಾತ ಸಂಭವಿಸಿದ್ದು, ಸಿರ್ಸಿ ಕಡೆಯಿಂದ ಹುಬ್ಬಳ್ಳಿ ಎತ್ತ ಸಾಗುತ್ತಿದ್ದ ಕಾರಿಗೆ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಬರುತ್ತಿರುವ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎಂದು ವರದಿಯಾಗಿದೆ. ಈ ಕಾರಿನಲ್ಲಿ ಮಂಗೇಶ್ ಬಂಡೆಯವರು ಪ್ರಯಾಣಿಸುತ್ತಿದ್ದರು.

RELATED ARTICLES  ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಅವಘಡ : ವ್ಯಕ್ತಿ ಸಾವು.

ಮಂಗೇಶ್ ಬಡ್ಡೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆಂದು ವರದಿಯಾಗಿದೆ. ಅಪಘಾತದ ನಂತರದಲ್ಲಿ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗೇಶ್ ಬೆಂಡೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದು, ಮುಂದಿನ ಪ್ರಕ್ರಿಯೆ ಕೈಗೊಂಡಿದ್ದಾರೆ. ಘಟನೆ ಕುರಿತಾಗಿ ಇನ್ನೂ ಹೆಚ್ಚಿನ ವಿವರ ತಿಳಿದು ಬರಬೇಕಿದೆ.

RELATED ARTICLES  ಈ ದೇವಾಲಯದಲ್ಲಿ ಶಿವಲಿಂಗಕ್ಕೆ ಬೆಣ್ಣೆ ಹಚ್ಚಿದರೆ ತುಪ್ಪವಾಗುತ್ತೆ!