ಕುಮಟಾ: ಲೋಕಶಕ್ತಿ ಪಕ್ಷದ ಸಂಸ್ಥಾಪಕರು ಆದ ಮಾಜಿ ಮುಖ್ಯ ಮಂತ್ರಿ ದಿವಂಗತ ಶ್ರೀ ರಾಮಕೃಷ್ಣ ಹೆಗಡೆ ಯವರ 97 ನೇ ಜನ್ಮ ದಿನಾಚರಣೆಯ ಅಂಗವಾಗಿ ಕುಮಟಾದ ಸರ್ಕಾರಿ ಆಸ್ಪತ್ರೆ ಯ ಒಳ ರೋಗಿಗಳಿಗೆ ಹಾಲು-ಹಣ್ಣು -ಬ್ರೆಡ್ ನ್ನು ಪಕ್ಷದ ಹಲವು ಕಾರ್ಯಕರ್ತ ರನ್ನು ಜೊತೆ ಗೂಡಿ ಪಕ್ಷದ ತಾಲೂಕಾಧ್ಯಕ್ಷ ದಿನೇಶ ಚಂದ್ರ ಎನ್ ಅಂಗಡಿಕೇರಿ ಯವರು ವಿತರಿಸಿದರು.

RELATED ARTICLES  ಕಲ್ಮೇಶ್ವರ ಸ್ವಾಮಿಗಳಿಗೆ ಗೋಕರ್ಣ ಗೌರವ

ಈ ಸಂದರ್ಭದಲ್ಲಿ ಅವರು ಮಾತನಾಡಿ ಕರ್ನಾಟಕ ಕಂಡ ಸಜ್ಜನ ಹಾಗೂ ಮೌಲ್ಯಾಧಾರಿತ ರಾಜಕಾರಣಿ ದಿ.ರಾಮಕೃಷ್ಣ ಹೆಗಡೆ ಯವರು. ಇವರ ಅವಧಿಯಲ್ಲಿ ಕರ್ನಾಟಕ ಸಾಮಾಜಿಕ ಹಾಗೂ ಸಾಂಸ್ಕ್ರತಿಕ ಅಭಿವೃದ್ಧಿ ಯನ್ನು ಕಂಡಿದೆ. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಬಲವಾಗಿ ನಂಬಿದ್ದ ಇವರು ರೈತರ, ದೀನ ದಲಿತರ, ಶೋಷಿತರ ಧ್ವನಿ ಯಾಗಿದ್ದರು. ತಮ್ಮ ಸುಮಧುರ ನಡೆ ನುಡಿಯಿಂದಾಗಿ ಇವರು ರಾಜ್ಯದ ಪ್ರತಿಯೊಬ್ಬರ ಕಣ್ಮಣಿ ಯಾಗಿದ್ದರು. ಆ ಸೂರ್ಯ, ಚಂದ್ರ ರು ಇರುವವರೆಗೂ ಇವರು ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಅಜರಾಮರ ರಾಗಿರುತ್ತಾರೆ. ಅವರು ಪ್ರೀತಿಸುವ ಬಡವರಿಗೆ ಅಳಿಲು ಸೇವೆ ಮಾಡುವುದು ನಮಗೆಲ್ಲ ದೊರೆತ ಸೌಭಾಗ್ಯ ಎಂದರು.
ಈ ಸಂದರ್ಭದಲ್ಲಿ ರಾಘವೇಂದ್ರ, ರಾಘವೇಂದ್ರ ಮಡಿವಾಳ, ಪ್ರಭಾಕರ ಶೇಟ್, ಶೇಖರ್ ಪಟಗಾರ ಮೊದಲಾದವರು ಹಾಗೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಉಪಸ್ಥಿತರಿದ್ದರು.

RELATED ARTICLES  ಮನೆಯಮೇಲೆ ಬಿದ್ದ ಬೃಹದಾಕಾರದ ಮರ