ಮುಂಡಗೋಡ: ಗದ್ದೆಯಲ್ಲಿ ಇದ್ದ ಮನೆಯ ಬಾಗಿಲು ಹತ್ತಿರ ಮರಕ್ಕೆ ಕಟ್ಟಿದ ಆಕಳೊಂದಕ್ಕೆ ಸಿಡಿಲು ಬಡಿದು ಮೃತಪಟ್ಟ ಘಟನೆ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಜರುಗಿದೆ. ಗ್ರಾಮದ ಎಸ್. ಜ್ಯೋತಿಭಾನವರ ಎಂಬ ರೈತರಿಗೆ ಸೇರಿದ ಆಕಳು ಸಿಡಿಲು ಬಡಿದು ಮೃತಪಟ್ಟಿದೆ.
ತಮ್ಮ ಗದ್ದೆಯ ಮನೆಯ ಎದುರಿಗೆ ಇರುವ ಮರಕ್ಕೆ ಕಟ್ಟಲಾದ ಆಕಳು ಸೋಮವಾರ ಸಾಯಂಕಾಲ ಗುಡುಗು ಮಿಂಚು ಸಹಿತ ಮಳೆ ಆರಂಭವಾದಾಗ ಸಿಡಿಲು ಬಡಿದು ಸಾವನ್ನಪ್ಪಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಒಂದಲ್ಲೊಂದು ಅನಾಹುತಗಳು ಸಂಭವಿಸುತ್ತದೆ. ಗುಡುಗು ಸಿಡಿಲಿನ ಪರಿಣಾಮ ಜನ ಜನಜಾನುವಾರುಗಳಿಗೆ ತೊಂದರೆಯಾಗುತ್ತಿದೆ.