ಇಡಗುಂಜಿ: ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಇಡಗುಂಜಿ ಮಹಾಗಣಪತಿ ಕ್ಷೇತ್ರಕ್ಕೆ ಜನಸಾಗರವೇ ಹರಿದು ಬರುತಿದ್ದು ಮುಂಜಾನೆಯಿಂದ ಸರತಿ ಸಾಲಿನಲ್ಲಿ ನಿಂತು ಭಕ್ತರು ಮಹಾಗಣಪತಿ ದೇವರ ದರ್ಶನ ಪಡೆದರು. ಚತುರ್ಥಿ ಹಿನ್ನಲೆಯಲ್ಲಿ ಇಂದು ಇಡಗುಂಜಿಯಲ್ಲಿ ಮಹಾಗಣಪತಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.

ಕಳೆದ ಎರಡು ವರ್ಷದಿಂದ ಕರೋನಾ ಕಾರಣಕ್ಕೆ ಸಾರ್ವಜನಿಕರಿಗೆ ವಿಶೇಷ ಪೂಜೆ ಹಾಗೂ ಚತುರ್ಥಿಯಂದು ದೇವರ ದರ್ಶನಕ್ಕೆ ನಿರ್ಬಂಧ ಹೇರಲಾಗಿತ್ತು. ಇದೀಗ ಸಾರ್ವಜನಿಕರಿಗೆ ವಿಶೇಷ ಪೂಜೆಗೆ ಅವಕಾಶ ನೀಡಿದ್ದರಿಂದ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ.

RELATED ARTICLES  ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಇದನ್ನೂ ಓದಿ – ಅಮೇರಿಕಾದಲ್ಲಿ ಕೊನೆಯುಸಿರೆಳೆದ ಪಲ್ಲವಿ ಹೆಗಡೆ, ಸಿದ್ದಾಪುರದ ಕುವರಿಯ ಶವ ಇನ್ನೆರಡು ದಿನದಲ್ಲಿ ಊರಿಗೆ.

ದೇವಾಲಯ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಸುಪ್ರೀಂ ಕೋರ್ಟ್ ದೇವಾಲಯಕ್ಕೆ ಜಿಲ್ಲಾ ನ್ಯಾಯಾಧೀಶರನ್ನು ‘ರಿಸೀವರ್’ ಆಗಿ ನೇಮಿಸಿದ್ದು, ಪ್ರಸ್ತುತ ಜಿಲ್ಲಾ ನ್ಯಾಯಾಧೀಶರ ಆಡಳಿತದಲ್ಲಿದೆ. ಕಳೆದೆರಡು ವರ್ಷ ಕೊರೋನಾ ಕಾರಣಕ್ಕೆ ಸಾರ್ವಜನಿಕರಿಗೆ ಚತುರ್ಥಿಯಂದು ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ಇದೀಗ ಇಡಗುಂಜಿ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಕೆಗೆ ಸಾರ್ವಜನಿಕರಿಗೆ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಆಡಳಿತ ಸಮಿತಿ ಅವಕಾಶ ಕಲ್ಪಿಸಿದೆ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ದೇವರ ದರ್ಶನಕ್ಕೆ ಆಗಮಿಸುತ್ತಿರುವ ಭಕ್ತರು, ಮಹಾಗಣಪನ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತು ಸಾಗಿ ಬರುತ್ತಿದ್ದಾರೆ.

RELATED ARTICLES  ಹೊಸತನಗಳೊಂದಿಗೆ ಬರಲಿದೆ ಬೀಟಾ ಆವೃತ್ತಿಯ ವಾಟ್ಸ್ ಅಪ್!

ಇದನ್ನೂ ಓದಿ – ಈತನ ಗುರುತು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ.